ಬಡಗನ್ನೂರು : ಬಡಗನ್ನೂರು ಗ್ರಾಮದ ಕೊಯಿಲ ನಿವಾಸಿ ನವೀನ್ ಕುಮಾರ್ ರೈ ಎಂಬವರ ಹಳೆಯ ಮನೆಯ ಸಮೀಪದ ಕೊಟ್ಟಿಗೆಯ ಅಟ್ಟದಲ್ಲಿ ಗೋಣಿಯಲ್ಲಿ ತುಂಬಿಸಿಟ್ಟಿದ್ದ ಸುಲಿದ ಸುಮಾರು 460 ಕೆಜಿ ಅಡಿಕೆ ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ.
ನವೀನ್ ಅವರು ನೀಡಿದ ದೂರಿನಂತೆ ಕಳವಾದ ಅಡಿಕೆಯ ಅಂದಾಜು ಮೌಲ್ಯ ರೂ. 1.2 ಲಕ್ಷ ಆಗಿದೆ ಎಂದು ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.