ವಿಟ್ಲ: ಸ್ಕೂಟರ್ ಮತ್ತು ಆಟೋ ನಡುವೆ ಅಪಘಾತ- ರಸ್ತೆಗೆ ಎಸೆಯಲ್ಪಟ್ಟ ಆಟೋ ಪ್ರಯಾಣಿಕ ಸಾವು

0
93

ವಿಟ್ಲ: ಪೆರುವಾಯಿ ಬೆರಿಪದವು ರಸ್ತೆಯಲ್ಲಿ ಸ್ಕೂಟರ್ ಹಾಗೂ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ್ದು, ರಿಕ್ಷಾ ಪ್ರಯಾಣಿಕರೊಬ್ಬರು ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಟಿದ್ದಾರೆ. ಬಾಯಾರು ಪೆರುವೋಡಿ ನಿವಾಸಿ ಸುರೇಶ್ ಭಟ್ ಪುತ್ರ ನಾಗೇಶ್ ಭಟ್ (೪೭) ನಿಧನರಾಗಿದ್ದಾರೆ.

ಪೆರುವಾಯಿ-ಬೆರಿಪದವು ರಸ್ತೆಯಲ್ಲಿ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟಿ ಮತ್ತು ಆಟೋರಿಕ್ಷಾ ಮುಖಾಮುಖಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡಿದ್ದ ಆಟೋ ಪ್ರಯಾಣಿಕ ನಾಗೇಶ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here