ನವದೆಹಲಿ : ಭಾರತದ ಮಾಜಿ ಕ್ರಿಕೆಟಿಗ, ಎಡಗೈ ಸ್ಪಿನ್ನರ್ ಬಿಶೆನ್ ಸಿಂಗ್ ಬೇಡಿ(77) ಅವರು ಇಂದು ನಿಧನರಾಗಿದ್ದಾರೆ.
ಬಿಶೆನ್ ಸಿಂಗ್ ಅವರು 1971 ರಲ್ಲಿ ಇಂಗ್ಲೆಂಡ್ ವಿರುದ್ದದ ಏಕದಿನ ಪಂದ್ಯಕ್ಕೆ ಭಾರತದ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದರು.
ಲೆಜೆಂಡರಿ ಸ್ಪಿನ್ನರ್ 1967 ಮತ್ತು 1979 ರ ನಡುವೆ ಭಾರತದ ಪರ 67 ಟೆಸ್ಟ್ ಪಂದ್ಯಗಳನ್ನು ಹಾಗೂ 10 ಏಕದಿನ ಪಂದ್ಯಗಳನ್ನಾಡಿದ್ದರು.
ಇನ್ನು ಎರಪಳ್ಳಿ ಪ್ರಸನ್ನ, ಬಿಎಸ್ ಚಂದ್ರಶೇಖರ್ ಮತ್ತು ಎಸ್. ವೆಂಕಟರಾಘವನ್ ಅವರೊಂದಿಗೆ ಬೇಡಿ ಭಾರತದ ಬೌಲಿಂಗ್ ಇತಿಹಾಸದಲ್ಲಿ ಅಚ್ಚಳಿಯದ ಸಾಧನೆಯನ್ನು ಮಾಡಿದ್ದಾರೆ.
ಬೇಡಿ ಅವರು ತಮ್ಮ ಪುತ್ರ ಮತ್ತು ಬಾಲಿವುಡ್ ನಟ ಅಂಗದ್ ಬೇಡಿ ಅವರನ್ನು ಅಗಲಿದ್ದಾರೆ.