ಪಾಕಿಸ್ತಾನಿ ಕ್ರಿಕೆಟ್ ಆಟಗಾರನಿಂದ ‘ಜಿಹಾದ್’ಗೆ ಸಮರ್ಥನೆ !’ ಈ ಕುರಿತು ಚರ್ಚಾಕೂಟ !

By: Ommnews

Date:

Share post:

ಆಟ’ವು ಆಟವಾಗಿಯೇ ಇರಬೇಕು, ಆದರ ಇಸ್ಲಾಮೀಕರಣ ಮಾಡಬಾರದು ! – ನ್ಯಾಯವಾದಿ ವಿನೀತ ಜಿಂದಾಲ್

Advertisement
Advertisement
Advertisement

ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆಯುತ್ತಿರುವಾಗ ಭಾರತದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಮೊಹಮ್ಮದ್ ರಿಜ್ವಾನ್ ಪಾಕಿಸ್ತಾನದ ವಿಜಯ ‘ಗಾಜಾ’ದ ಮುಸಲ್ಮಾನರಿಗೆ ಸಮರ್ಪಿಸಿದನು. ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಇಸ್ಲಾಂನ ಈ ಪ್ರಚಾರ ನೋಡಿ ಆಟದಲ್ಲಿ ಇಸ್ಲಾಮಿಕ್ ಜಿಹಾದ್ ನ ಪ್ರಚಾರ ನಿಲ್ಲಬೇಕು ಮತ್ತು ಅಲ್ಲಿ ಕೇವಲ ಆಟ ಆಡಬೇಕು, ಎಂದು ನಾನು ಐ.ಸಿ.ಸಿ. (ಅಂತರಾಷ್ಟ್ರೀಯ ಕ್ರಿಕೆಟ್ ಪರಿಷತ್) ಮತ್ತು ಬಿ.ಸಿ.ಸಿ.ಐ. (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಇವರಲ್ಲಿ ದೂರು ನೀಡಿದ್ದೇನೆ.

ಆಟವನ್ನು ಆಟವಾಗಿ ಇರಲು ಬಿಡಿ. ಅದರ ಇಸ್ಲಾಮಿಕರಣ ಮಾಡಬೇಡಿ. ೮೦ ಕೋಟಿ ಹಿಂದುಗಳ ಜನಸಂಖ್ಯೆ ಇರುವ ಋಷಿ ಮುನಿಗಳ ಭಾರತ ಭೂಮಿಯಲ್ಲಿ ಯಾರಾದರೂ ಜಿಹಾದ್ ಮತ್ತು ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಿದ್ದರೆ ಅದಕ್ಕೆ ಪ್ರತಿಯೊಬ್ಬ ಹಿಂದೂ ಕಟುವಾಗಿ ವಿರೋಧಿಸುವನು, ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿನ ನ್ಯಾಯವಾದಿ ವಿನೀತ್ ಜಿಂದಾಲ ಇವರು ಸ್ಪಷ್ಟವಾಗಿ ಪ್ರತಿಪಾದಿಸಿದರು.

ಅವರು ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ಪಾಕಿಸ್ತಾನಿ ಕ್ರಿಕೆಟ್ ಆಟಗಾರರ ಮೂಲಕ ಜಿಹಾದ್ ಗೆ ಸಮರ್ಥನೆ ! ಈ ಚರ್ಚಾ ಕೂಟದಲ್ಲಿ ಮಾತನಾಡುತ್ತಿದ್ದರು.

ನ್ಯಾಯವಾದಿ ವಿನೀತ್ ಜಿಂದಾಲ ಇವರು ಮಾತು ಮುಂದುವರೆಸಿ, ಕೇವಲ ಕ್ರಿಕೆಟ್ ಅಷ್ಟೇ ಅಲ್ಲದೆ, ಫುಟ್ಬಾಲ್, ಯು ಎನ್ ಓ ಇಂತಹ ಅಂತರಾಷ್ಟ್ರೀಯ ವೇದಿಕೆಯಲ್ಲಿ ಇಸ್ಲಾಂ ಶಕ್ತಿಶಾಲಿ ಮತ್ತು ಮಹಾನ್ ಆಗಿದೆ ಎಂದು ತೋರಿಸುವ ಪ್ರಯತ್ನ ಮಾಡುತ್ತಾ ಇತರ ಧರ್ಮಗಳಲ್ಲಿ ಕೀಳಿರಿಮೆಯ ಭಾವನೆ ನಿರ್ಮಾಣ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಪಾಕಿಸ್ತಾನಿ ಆಟಗಾರರು ಕ್ರಿಕೆಟ್ ಮೈದಾನದಲ್ಲಿ ನಮಾಜ ಪಠಿಸುತ್ತಾರೆ. ನಾನು ದೂರು ನೀಡಿದ ನಂತರ ಕಳೆದ 10 ದಿನಗಳಲ್ಲಿ ನನಗೆ ಪಾಕಿಸ್ತಾನ, ಟರ್ಕಿ ಮುಂತಾದ ದೇಶಗಳಿಂದ 60 ಕ್ಕು ಹೆಚ್ಚಿನ ಬೆದರಿಕೆ ಕರೆಗಳು ಬಂದಿವೆ. ನಮ್ಮ ವಿರೋಧ ಆಟವನ್ನು ಧಾರ್ಮಿಕೀಕರಣ ಮಾಡುವುದಕ್ಕೆ ಇದೆ. ಇದನ್ನು ಅವರು ತಿಳಿದುಕೊಳ್ಳಬೇಕು.

*ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪೂರ್ವ ಮತ್ತು ಪೂರ್ವೋತ್ತರ ಭಾರತದ ಸಮನ್ವಯಕರಾದ ಶ್ರೀ. ಶಂಭು ಗವಾರೆ ಇವರು,* 1982 ರಿಂದ ಈಗ 2023 ರ ವರೆಗೆ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಭಾರತದದೊಂದಿಗೆ ಕ್ರಿಕೆಟ್ ಆಡಲು ಜಿಹಾದ್ ಜೋಡಿಸಿದ್ದಾರೆ. ಶ್ರೀಕಾಂತ, ಗಂಗೂಲಿ, ಇರ್ಫಾನ್ ಪಠಾಣ್ ಇವರಂತಹ ಅನೇಕ ಭಾರತೀಯ ಆಟಗಾರರು ಪಾಕಿಸ್ತಾನದ ವಿರುದ್ಧ ಆಡುವಾಗ ಹಲ್ಲೆ, ಕಲ್ಲುತೂರಾಟ ಎದುರಿಸಿದ್ದಾರೆ. ಹೈದರಾಬಾದ್ ನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ನೀಡುತ್ತಾರೆ, ಆಗ ಅಲ್ಲಿಯ ಕಮ್ಯುನಿಸ್ಟ್ ಜಾತ್ಯಾತೀತರಿಗೆ ಆನಂದವಾಗುತ್ತದೆ.

ಆದರೆ ಅಹಮದಾಬಾದನಲ್ಲಿ ಜೈ ಶ್ರೀರಾಮ ಘೋಷಣೆ ಕೂಗಿದರೆ ಅವರಿಗೆ ದುಃಖವಾಗುತ್ತದೆ. ಪಾಕಿಸ್ತಾನಿ ಕ್ರಿಕೆಟ ಆಟಗಾರರು ಮೈದಾನದಲ್ಲಿ ನಮಾಜ್ ಪಠಿಸುತ್ತಾರೆ. ಅಲ್ಲಾಹು ಅಕ್ಬರ್ ಘೋಷಣೆ ನೀಡುತ್ತಾರೆ, ಗಾಜಾದಲ್ಲಿನ ಭಯೋತ್ಪಾದಕರಿಗೆ ಸಮರ್ಥನೆ ನೀಡುತ್ತಾರೆ, ಇದರ ಬಗ್ಗೆ ಐಸಿಸಿ ಇಂದ ಕ್ರಮ ಕೈಗೊಳ್ಳಬೇಕು ಮತ್ತು ಜಿಹಾದ್ ಸಮರ್ಥಕರ ಆಟದ ಮೇಲೆ ನಿಷೇಧ ಹೇರಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ.

ನಿಮ್ಮ ಸವಿನಯ , ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ ಸಂಪರ್ಕ: 9987966666

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section