ರಾಜ್ಯಾದ್ಯಂತ ಡೆಂಘೀ ಜ್ವರ ಏರಿಕೆ

By: Ommnews

Date:

Share post:

ಬೆಂಗಳೂರು : ರಾಜ್ಯಾದ್ಯಂತ ದಿನೇದಿನೆ ಡೆಂಘೀ ಜ್ವರ ಪ್ರಕರಣಗಳು ಏರಿಕೆಯಾಗಿದ್ದು, ಆರೋಗ್ಯ ಇಲಾಖೆ ಪ್ರಕಾರ ಕಳೆದ 20 ದಿನಗಳಲ್ಲಿ 1,404 ಮಂದಿಗೆ ಜ್ವರ ದೃಢಪಟ್ಟಿದೆ.

Advertisement
Advertisement
Advertisement

ಈವರೆಗೆ ಡೆಂಘೀ ಜ್ವರ ಪ್ರಕರಣಗಳು ಬೆಂಗಳೂರು ನಗರದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದವು. ಆದರೆ ಕಳೆದ 20 ದಿನಗಳಿಂದ ಬೆಂಗಳೂರುನಗರಕ್ಕಿಂತ ವೇಗವಾಗಿ ರಾಜ್ಯದ ಇತರೆ ಪ್ರದೇಶಗಳಲ್ಲಿ ಡೆಂಘೀ ಜ್ವರ ಪ್ರಕರಣಗಳು ಹೆಚ್ಚಾಗುತ್ತಿವೆ. ನಿರ್ಲಕ್ಷ್ಯ ಮಾಡಿದರೆ ಮಾರಣಾಂತಿಕವಾಗಬಲ್ಲ ಜ್ವರದ ಬಗ್ಗೆ ಎಚ್ಚರ ವಹಿಸಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಡೆಂಘೀ ಜ್ವರ ಪ್ರಕರಣಗಳ ಸಂಖ್ಯೆ ಅ.20ರ ವೇಳೆಗೆ ಬೆಂಗಳೂರು ನಗರದಲ್ಲಿ 6,139 ಆಗಿದ್ದು, 372 ಪ್ರಕರಣ ಹೆಚ್ಚಾಗಿದೆ. ಇನ್ನು ರಾಜ್ಯದ ಇತರೆಡೆ 4,505 ರಷ್ಟಿದ್ದ ಪ್ರಕರಣಗಳು 5,571ಕ್ಕೆ ಏರಿಕೆಯಾಗಿದ್ದು, 20 ದಿನಗಳಲ್ಲಿ 1,066 ಮಂದಿಗೆ ಡೆಂಘೀ ಸೋಂಕು ದೃಢಪಟ್ಟಿದೆ. ಇವು ಆರೋಗ್ಯ ಇಲಾಖೆಗೆ ವೈದ್ಯರು ವರದಿ ಮಾಡಿರುವ ಅಂಕಿ-ಅಂಶಗಳಾಗಿದ್ದು, ವಾಸ್ತವವಾಗಿ ಇನ್ನೂ ಹೆಚ್ಚಿನ ಪ್ರಕರಣಗಳು ವರದಿಯಾಗಿರುತ್ತವೆ. ಹೀಗಾಗಿ ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section