ಅರಿಯಡ್ಕ : ಅರಿಯಡ್ಕ ಗ್ರಾಮದ ಬೈರಮೂಲೆಯಲ್ಲಿ ವ್ಯಕ್ತಿಯೋರ್ವ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಅ. 21ರಂದು ಸಂಭವಿಸಿದೆ.
ಬೈರಮೂಲೆ ಕನ್ನ ಪಾಟಾಳಿಯವರ ಪುತ್ರ ಶಿವಪ್ರಸಾದ್ (40) ಮೃತಪಟ್ಟವರು. ಯಂತ್ರದ ಮೂಲಕ ತೋಟದ ಹುಲ್ಲು ತೆಗೆಯುವ ಕೆಲಸ ಮಾಡಿಕೊಂಡಿದ್ದರು.
ಅ. 21ರಂದು ಸ್ಥಳೀಯ ಕುರಿಂಜ ಹೊಸಮನೆ ಚಂದ್ರಶೇಖರ ಮಣಿಯಾಣಿ ಅವರ ತೋಟಕ್ಕೆ ಕೆಲಸಕ್ಕೆ ತೆರಳಿದ್ದು ಅಲ್ಲಿ ಕೈ ಕಾಲು ತೊಳೆಯಲು ಕೆರೆಗೆ ಇಳಿದಿದ್ದರು ಎನ್ನಲಾಗಿದೆ. ಈ ವೇಳೆ ಆಯ ತಪ್ಪಿ ಕೆರೆಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಘಟನಾ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಎಸ್‌ಐ ಧನಂಜಯ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ತೂರು ಅಗ್ನಿ ಶಾಮಕ ದಳದವರು ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ.