ಅಕ್ಕಿ ಕಾಳಿನಲ್ಲಿ ನಾಡಗೀತೆ ಬರೆಯುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಸೇರಿದ ಪರಮೇಶ್

0
90

ಸುಬ್ರಹ್ಮಣ್ಯ: ಕಲಾವಿದ ಮೈಕ್ರೊ ಪರಮೇಶ್ ಅಕ್ಕಿ ಕಾಳಿನಲ್ಲಿ ನಾಡಗೀತೆ ಬರೆಯುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಸೇರಿದ್ದಾರೆ. ನಾಡಗೀತೆ ಬರೆಯಲು 136 ಅಕ್ಕಿ ಕಾಳು ಹಾಗೂ 2 ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ, ಕಡಿಮೆ ಅಕ್ಕಿ ಕಾಳುಗಳನ್ನು ಬಳಸಿಕೊಂಡು ಈ ದಾಖಲೆ ಮಾಡಿರುವುದು ಅವರ ಸಾಧನೆಯಾಗಿದೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಸಂಸ್ಥೆಯುವರು ಇತ್ತೀಚೆಗೆ ಕುಕ್ಕೆಗೆ ಬಂದು ಪರಮೇಶ ಅವರ ಸಾಧನೆಯನ್ನು ವೀಡಿಯೊ ದಾಖಲೆ ಮಾಡಿಕೊಂಡು ಹೋಗಿದ್ದರು. ಗುರುವಾರ ಸಂಸ್ಥೆಯು ಪ್ರಮಾಣ ಪತ್ರವನ್ನು ಹಸ್ತಾಂತರಿಸಿತು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿರುವ ಪರಮೇಶ್ ಮೂಲತಃ ಹಾವೇರಿಯವರು. ಅಕ್ಕಿ ಕಾಳಿನಲ್ಲಿ ಬರೆಯುವ ಸೂಕ್ಷ್ಮ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here