ನವರಾತ್ರಿ ಹಬ್ಬಕ್ಕೆ ಶುಭ ಕೋರಿದ ಕೆನಡಾದ ಪ್ರಧಾನಿ

By: Ommnews

Date:

Share post:

ಒಟ್ಟಾವಾ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ನವರಾತ್ರಿ ಹಬ್ಬಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

Advertisement
Advertisement
Advertisement

ಟ್ರುಡೋ ಎರಡೂ ದೇಶಗಳ ಸಂಬಂಧಗಳನ್ನು ಸರಿಪಡಿಸುವ ಪ್ರಯತ್ನದಲ್ಲಿ ಹಿಂದೂಗಳ ಹಬ್ಬ ನವರಾತ್ರಿಗೆ ಶುಭಾಶಯವನ್ನು ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ನವರಾತ್ರಿಯ ಶುಭಾಶಯಗಳು. ನಾನು ಹಿಂದೂ ಸಮುದಾಯದ ಸದಸ್ಯರಿಗೆ ಹಾಗೂ ಈ ಹಬ್ಬವನ್ನು ಆಚರಿಸುತ್ತಿರುವ ಎಲ್ಲರಿಗೂ ಆತ್ಮೀಯತೆಯ ಶುಭಾಶಯಗಳನ್ನು ಕೋರುತ್ತೇನೆ ಎಂದಿದ್ದಾರೆ.

ಟ್ರುಡೋ ಹಿಂದೂ ಸಮುದಾಯದಲ್ಲಿ ನವರಾತ್ರಿಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದಾರೆ. ಅವರು ಹಿಂದೂ ಸಂಸ್ಕೃತಿಯ ಬಗ್ಗೆ ಅರಿಯಲು ಹಾಗೂ ಕೆನಡಾಗೆ ಈ ಸಮುದಾಯದ ಕೊಡುಗೆಗಳನ್ನು ಶ್ಲಾಘಿಸಲು ಈ ಹಬ್ಬವನ್ನು ಗುರುತಿಸಿದ್ದಾರೆ.

ಕೆನಡಾದ ಪ್ರಧಾನಿ ಬಿಡುಗಡೆ ಮಾಡಿದ ಅಧಿಕೃತ ಮಾಧ್ಯಮ ಹೇಳಿಕೆಯಲ್ಲಿ ಮುಂದಿನ 9 ರಾತ್ರಿ ಹಾಗೂ 10 ಹಗಲುಗಳಲ್ಲಿ ಕೆನಡಾ ಮತ್ತು ಪ್ರಪಂಚಾದ್ಯಂತ ಹಿಂದೂ ಸಮುದಾಯದ ಸದಸ್ಯರು ನವರಾತ್ರಿಯನ್ನು ಆಚರಿಸಲು ಒಟ್ಟಾಗಲಿದ್ದಾರೆ ಎಂದಿದ್ದಾರೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section