ಚಿಕ್ಕೋಡಿ: ಮಹಿಷಾಸುರ ದುರ್ಗುಣಗಳ ಪ್ರತೀಕ ಎಂದು ಮಹಿಷ ದಸರಾ ಉತ್ಸವ ಆಚರಣೆ ಕುರಿತು ಉಡುಪಿಯ ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಭಾಗಿಯಾಗಿ ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದರು. ಮಹಿಷಾಸುರ ಮರ್ದಿನಿ ಎಂದು ಚಾಮುಂಡೇಶ್ವರಿ ಪೂಜೆ ಮಾಡುತ್ತೇವೆ. ದುಷ್ಟ ಅಂತ ಹೇಳಿ ಚಾಮುಂಡೇಶ್ವರಿ ಮಹಿಷಾಸುರನನ್ನು ಮರ್ದನ ಮಾಡಿದ್ದಾಳೆ ಎಂದು ತಿಳಿಸಿದರು.
ಚಾಮುಂಡೇಶ್ವರಿ ಉತ್ಸವವನ್ನು ಸರ್ಕಾರವೇ ಮಾಡುತ್ತಿದೆ. ಮತ್ತೊಂದು ಕಡೆ ಮಹಿಷಾಸುರನ ಉತ್ಸವ ಮಾಡುವಲ್ಲಿ ಅರ್ಥವಿಲ್ಲ. ದುರ್ಗುಣಗಳ ಉತ್ಸವ ಮಾಡುವುದು ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದಿಲ್ಲ ಎಂದು ಹೇಳಿದರು.