ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಲಘು ವಿಮಾನ ಪತನ – ಮೃತಪಟ್ಟ ತರಬೇತಿಯಲ್ಲಿದ್ದ ಇಬ್ಬರು ಭಾರತದ ಪೈಲಟ್‍ಗಳು

0
109

ಟೊರೊಂಟೊ: ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಲಘು ವಿಮಾನವೊಂದು ಪತನಗೊಂಡು ತರಬೇತಿಯಲ್ಲಿದ್ದ ಇಬ್ಬರು ಭಾರತದ ಪೈಲಟ್‍ಗಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಮೃತ ಪೈಲಟ್‍ಗಳನ್ನು ಮುಂಬೈನ ಅಭಯ್ ಗದ್ರು (25) ಮತ್ತು ಯಶ್ ರಾಮುಗಡೆ ಎಂದು ಗುರುತಿಸಲಾಗಿದೆ. ಪೈಪರ್ ಪಿಎ -34 ಸೆನೆಕಾ ಎಂಬ ವಿಮಾನದಲ್ಲಿ ಅವರು ಪ್ರಯಾಣಿಸುತ್ತಿದ್ದರು. ಈ ವೇಳೆ ವ್ಯಾಂಕೋವರ್‌ನಿಂದ 100 ಕಿಮೀ ಪೂರ್ವದಲ್ಲಿರುವ ಚಿಲ್ಲಿವಾಕ್‍ನ ಸ್ಥಳೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ.

ಮೃತದೇಹವನ್ನು ಮುಂಬೈಗೆ ತರುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಅವರ ಕುಟುಂಬಸ್ಥರೊಂದಿಗೆ ಮಾತಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಪತನಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here