ನವದೆಹಲಿ : ಈ ಬಾರಿಯ ಸೂರ್ಯಗ್ರಹಣ ಅಕ್ಟೋಬರ್ 14 ರಂದು ನಡೆಯಲಿದೆ. ಇದೇ ವೇಳೆ ನಾಸಾ, ಭೂಮಯ ಮೇಲೆ ಸೂರ್ಯಗ್ರಹಣದ ಪರಿಣಾಮವನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ಬಾಹ್ಯಾಕಾಶಕ್ಕೆ ಮೂರು ರಾಕೆಟ್‌ಗಳನ್ನು ಉಡಾಯಿಸಲು ಯೋಜನೆ ರೂಪಿಸಿದೆ. ಈ ಯೋಜನೆಯನ್ನು ಭಾರತೀಯ ಮೂಲದ ನಾಸಾ ವಿಜ್ಞಾನಿ ಅರೋಹ್ ಬರ್ಜಾತ್ಯಾ ಮುನ್ನಡೆಸಲಿದ್ದಾರೆ.
ಎಪಿಇಪಿ ಅಥವಾ ಗ್ರಹಣದ ಸಮಯದಲ್ಲಿ ವಾತಾವರಣದ ಪ್ರಕ್ಷುಬ್ದತೆ ಎಂದು ಈ ಯೋಜನೆಯನ್ನು ಕರೆಯಲಾಗಿದೆ. ಇದನ್ನು ಅರೋಹ್ ಬರ್ಜಾತ್ಯಾ ಮುನ್ನಡೆಸಲಿದ್ದು, ಸೂರ್ಯನ ಬೆಳಕಿನ ಹಠಾತ್ ಕುಸಿತವು ನಮ್ಮ ಮೇಲಿನ ವಾತಾವರಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಈ ಯೋಜನೆ ಅಧ್ಯಯನ ಮಾಡುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.