ಮಹೇಂದ್ರ ಸಿಂಗ್ ಧೋನಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡ ಜಿಯೋಮಾರ್ಟ್

By: Ommnews

Date:

Share post:

ಮುಂಬೈ: ರಿಲಯನ್ಸ್ ರಿಟೇಲ್‌ನ ಜಿಯೋಮಾರ್ಟ್ ದೇಶದ ಪ್ರಮುಖ ಇ-ಮಾರ್ಕೆಟ್‌ ಪ್ಲೇಸ್‌ಗಳಲ್ಲಿ ಒಂದಾಗಿದ್ದು, ಭಾರತೀಯ ಕ್ರಿಕೆಟ್ ಐಕಾನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ. ಇದರ ಜೊತೆಗೆ, ತನ್ನ ಹಬ್ಬದ ಕ್ಯಾಂಪೇನ್ ಅನ್ನು ಜಿಯೋ ಉತ್ಸವ, ಸೆಲೆಬ್ರೇಶನ್‌ ಆಫ್‌ ಇಂಡಿಯಾ ಎಂದು ಮರುನಾಮಕರಣ ಮಾಡಿದ್ದು, 2023 ಅಕ್ಟೋಬರ್ 8 ರಿಂದ ಲೈವ್ ಆಗಲಿದೆ.

Advertisement
Advertisement
Advertisement

ಜಿಯೋಮಾರ್ಟ್ ಸಿಇಒ ಸಂದೀಪ್ ವರಗಂಟಿ, ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ಎಂಎಸ್ ಧೋನಿ ಅತ್ಯಂತ ಉತ್ತಮವಾಗಿ ಹೊಂದಿಕೆಯಾಗುತ್ತಾರೆ. ಅವರ ವ್ಯಕ್ತಿತ್ವವು ಜಿಯೋಮಾರ್ಟ್‌ನ ಹಾಗೆಯೇ ವಿಶ್ವಾಸ, ನಂಬಿಕೆ ಮತ್ತು ಖಾತರಿಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಪ್ರೀತಿ ಪಾತ್ರರ ಜೊತೆಗೆ ವಿಶೇಷ ಕ್ಷಣಗಳನ್ನು ಕಳೆಯುವುದಕ್ಕೆ ನಮ್ಮ ಹೊಸ ಅಭಿಯಾನವು ಅನುವು ಮಾಡುತ್ತದೆ. ಇದರಲ್ಲಿ ಶಾಪಿಂಗ್ ಎಂಬುದು ಒಂದು ಅವಿಭಾಜ್ಯ ಅಂಗ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ಮೆಟ್ರೋ ಹೊರತಾದ ಪ್ರದೇಶಗಳು ಒಟ್ಟಾರೆ ಸೇಲ್ ನಲ್ಲಿ ಸುಮಾರು 60% ಪಾಲು ಹೊಂದಿದೆ. ಇದು ದೇಶದ ರಿಟೇಲ್ ವಲಯ ವಿಕೇಂದ್ರೀಕರಣಗೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಕ್ಯಾಂಪೇನ್ ಶೂಟಿಂಗ್‌ನ ಭಾಗವಾಗಿ, ಬಿಹಾರದ ಪ್ರಶಸ್ತಿ ಪುರಸ್ಕೃತ ಕಲಾವಿದೆ ಅಂಬಿಕಾ ದೇವಿಯವರ ಮಧುಬನಿ ಪೇಂಟಿಂಗ್ ಅನ್ನು ಧೋನಿಯವರಿಗೆ ವರಗಂಟಿ ಪ್ರದಾನ ಮಾಡಿದರು.

ಮಹೇಂದ್ರ ಸಿಂಗ್ ಧೋನಿ ಪ್ರತಿಕ್ರಿಯಿಸಿ, ಜಿಯೋಮಾರ್ಟ್‌ನ ಮೌಲ್ಯ ಮತ್ತು ಗುರುತಿಗೂ ನನಗೂ ಹೊಂದಿಕೆಯಾಗುತ್ತದೆ. ದೇಶೀಯ ಇ-ಕಾಮರ್ಸ್ ಬ್ರಾಂಡ್ ಆಗಿರುವ ಇದು ಭಾರತದಲ್ಲಿ ಡಿಜಿಟಲ್ ರಿಟೇಲ್ ಕ್ರಾಂತಿಯನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಭಾರತವು ವೈವಿಧ್ಯಮ ಸಂಸ್ಕೃತಿ ಜನರು ಮತ್ತು ಹಬ್ಬಗಳಿಗೆ ಹೆಸರಾಗಿದೆ. ಭಾರತ ಮತ್ತು ಭಾರತೀಯರ ಸಂಭ್ರಮಕ್ಕೆ ಜಿಯೋಮಾರ್ಟ್‌ನ ಜಿಯೋ ಉತ್ಸವವು ಹೊಸ ಆಯಾಮವನ್ನು ನೀಡಿದೆ. ಜಿಯೋಮಾರ್ಟ್ ಜೊತೆಗೆ ಗುರುತಿಸಿಕೊಳ್ಳಲು ಮತ್ತು ಲಕ್ಷಾಂತರ ಭಾರತೀಯರ ಶಾಪಿಂಗ್ ಪಯಣದ ಭಾಗವಾಗುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section