ಉಡುಪಿ : ಉಡುಪಿಯಿಂದ ಮಂಗಳೂರಿಗೆ ಬೆಳಿಗ್ಗೆ ಬರುವ KSRTC ಬಸ್ಸಿನಲ್ಲಿ ಪ್ರತಿನಿತ್ಯ 100 ರಿಂದ 115 ಪ್ರಯಾಣಿಕರು ಒಂದೇ ಬಸ್ಸಿನಲ್ಲಿ ಸಂಚರಿಸುತ್ತಾರೆ.
ಪ್ರತೀದಿನ ವಿದ್ಯಾರ್ಥಿಗಳು, ಕಚೇರಿಗೆ ಮತ್ತು ಇನ್ನಿತರ ಕೆಲಸಗಳಿಗೆ ತೆರಳುವವರು KSRTC ಬಸ್ಸನ್ನೇ ಅವಲಂಬಿಸಿದ್ದಾರೆ.
ಪ್ರಯಾಣಿಕರು ಮಂಗಳೂರಿನ KSRTC, DC ಗೆ ಸುಮಾರು 2020 ಇಸವಿಯಿಂದ ಉಡುಪಿಯಿಂದ ಮಂಗಳೂರಿಗೆ ಪ್ರತ್ಯೇಕ ಬಸ್ಸಿನ ಬೇಡಿಕೆ ಇಟ್ಟಿರುತ್ತಾರೆ. ಇದುವರೆಗೂ ಮಂಗಳೂರಿನ KSRTC, DC ಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಉಡುಪಿ, ಮಂಗಳೂರಿನಲ್ಲಿ ಖಾಸಗಿ ಬಸ್ಸುಗಳಿಗೆ ಕಠಿಣವಾದ ಕ್ರಮವನ್ನು ಜಾರಿಗೊಳಿಸಲಾಗಿದೆ. ಆದರೆ KSRTC ಬಸ್ಸುಗಳಿಗೆ ಯಾಕಿಲ್ಲ? ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಸಾರಿಗೆ ಇಲಾಖೆ ಇದರ ಬಗ್ಗೆ ಗಮನಹರಿಸಬೇಕಾಗಿ ಸಾರ್ವಜನಿಕರು ವಿನಂತಿಸಿಕೊಂಡಿದ್ದಾರೆ.