ರಾಜ್ಯ

ಹಿಂದೂಗಳಿಗೆ ಕರ್ನಾಟಕ ಸೇಫ್ ಅಲ್ಲ ಎಂಬ ಭಾವನೆ ಬರುವ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಿದೆ – ಕೋಟಾ ಶ್ರೀನಿವಾಸ ಪೂಜಾರಿ

ಬೆಂಗಳೂರು : ಸಿದ್ದರಾಮಯ್ಯ ಸರ್ಕಾರ ಹಿಂದೂಗಳಿಗೆ ಸುರಕ್ಷಿತ ಅಲ್ಲ ಎಂದು ಬಿಜೆಪಿ ಮಾಜಿ ಸಚಿವ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗ ಗಲಭೆ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ಗುರುವಾರ ಸತ್ಯ ಶೋಧನ ಸಮಿತಿ ಶಿವಮೊಗ್ಗಗೆ ಹೋಗಿತ್ತು.ನೊಂದ ಹಿಂದೂಗಳು ಸಮಿತಿ ಮುಂದೆ ಬದುಕಲಿ ಬಿಡಿ ಅಂತ ಹೇಳ್ತಿದ್ದಾರೆ. ನಾವು ಪಾಠ ಕಲಿಸಿದ ಮಕ್ಕಳು ಶಿಕ್ಷಕರಾದ ನಮ್ಮ ಮನೆಗೆ ಕಲ್ಲಿನಿಂದ ಹೊಡೆಯುವ ದುರಂತ ನೋಡಬೇಕಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಊರು ಬಿಟ್ಟು ಹೋಗೋ ಸ್ಥಿತಿ ನಿರ್ಮಾಣ ಆಗಿತ್ತು. ಈಗ ಅದೇ ನೋವನ್ನ ರಾಗಿಗುಡ್ಡದಲ್ಲಿ ಇರುವ ಹಿಂದೂಗಳು ಅನುಭವಿಸುತ್ತಿದ್ದಾರೆ ಅಂತ ಸರ್ಕಾರದ ವಿರುದ್ದ ಕಿಡಿಕಾರಿದರು.

  • ಹಿಂದೂಗಳಿಗೆ ಕರ್ನಾಟಕ ಸೇಫ್ ಅಲ್ಲ ಎಂಬ ಭಾವನೆ ಬರುವ ವಾತಾವರಣವನ್ನ ಸರ್ಕಾರ ನಿರ್ಮಾಣ ಮಾಡಿದೆ. ದುರಾದೃಷ್ಟಕ್ಕೆ ಹಿರಿಯ ಸಚಿವರು ವೇಷ ಮರೆಸಿಕೊಂಡು ಬಂದಿದ್ದಾರೆ ಅಂತ ಹಿಂದೂಗಳ ಮೇಲೆ ಆರೋಪ ಮಾಡ್ತಾರೆ. ತ್ರಿಶೂಲ ಇಟ್ಟುಕೊಂಡಿದ್ದಕ್ಕೆ ತಳವಾರ್ ಹಿಡಿದ್ದಾರೆ ತಪ್ಪೇನು ಅಂತ ಉಸ್ತುವಾರಿ ಮಂತ್ರಿ ಕೇಳ್ತಾರೆ. ಗಣೇಶೋತ್ಸವದಲ್ಲಿ ಯಾರಾದರೂ ತ್ರಿಶೂಲ ಹಿಡಿದುಕೊಂಡಿರುವುದನ್ನು ತೋರಿಸಲಿ ನೋಡೋಣ ಎಂದು ಸವಾಲ್ ಹಾಕಿದರು.
  • ನೋವಿನ ಸಂಗತಿ ಅಂದರೆ 75 ಸಾವಿರ ರೂ. ನಷ್ಟ ಅಂತ ಜಿಲ್ಲಾಡಳಿತ ವರದಿ ಕೊಟ್ಟಿದೆ. 6-7 ಕಾರು ಜಖಂ ಆಗಿದೆ. ಮನೆಗಳ ಗಾಜು ಒಡೆದು ಹೋಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕೇವಲ 75 ಸಾವಿರ ರೂ. ನಷ್ಟ ಅಂತ ತೋರಿಸಿ ಇಷ್ಟು ದೊಡ್ಡ ಗಲಟೆಯನ್ನ ಏನು ಇಲ್ಲ ಅಂತ ಸರ್ಕಾರ ತೋರಿಸಲು ಹೊರಟಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳು ಸುರಕ್ಷಿತ ಅಲ್ಲ ಅನ್ನೋ ಸ್ಥಿತಿ ಆಗಿದೆ ವಾಗ್ದಾಳಿ ನಡೆಸಿದರು.
  • ರಾಗಿಗುಡ್ಡದ ಜನರು ಕಣ್ಣೀರು ಹಾಕುತ್ತಿದ್ದಾರೆ. ಹೀಗಿದ್ದರೂ ಸಿಎಂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಕೊಡುತ್ತೇನೆ ಎಂದು ಹೇಳಿಲ್ಲ. ಏನೇ ನಷ್ಟ ಆದರೂ ನಮಗೂ ಸರ್ಕಾರಕ್ಕೂ ಸಂಬಂಧ ಇಲ್ಲ ಎಂಬ ರೀತಿ ಇದ್ದಾರೆ. ಎಸ್‌ಪಿ, ‌ಡಿಸಿಗೆ ಈ ಸರ್ಕಾರ ಕೆಲಸ ಮಾಡಲು ಬಿಡುತ್ತಿಲ್ಲ. ಸರ್ಕಾರದ ನಡೆಯನ್ನು ನಾವು ಖಂಡಿಸುತ್ತೇವೆ. ಗೃಹ ಸಚಿವರು ಸ್ಥಳಕ್ಕೆ ಹೋಗಿ ಸಮಸ್ಯೆ ಆಲಿಸುತ್ತಾರೆ ಅಂದರೆ ಅವರು ರಾಜ್ಯದಲ್ಲಿ ಇಲ್ಲ ಅನ್ನೋ ಮಾಹಿತಿ ಇದೆ. ಸಿದ್ದರಾಮಯ್ಯ ಇಂತಹ ಆಡಳಿತ ನೀಡುತ್ತಿರುವುದು ನೋವಿನ ಸಂಗತಿ ಅಂತ ಕಿಡಿಕಾರಿದರು.
chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago