ಏಶಿಯನ್ ಗೇಮ್ಸ್ : ಬಾಂಗ್ಲಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ – ಫೈನಲಿಗೆ ಭಾರತ

By: Ommnews

Date:

Share post:

ಹ್ಯಾಂಗ್‌ಝೋ: ಏಷ್ಯನ್‌ ಕ್ರೀಡಾಕೂಟದ ಕ್ರಿಕೆಟ್‌ ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ ಫೈನಲ್‌ ಪ್ರವೇಶಿಸಿದೆ.

Advertisement
Advertisement
Advertisement

ಟಾಸ್‌ ಸೋತು ಬ್ಯಾಟ್‌ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 96 ರನ್‌ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಭಾರತ 9.1 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 97 ರನ್‌ ಗಳಿಸಿತು.

ನೇಪಾಳ ವಿರುದ್ಧ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್‌ ಈ ಬಾರಿ ಮೊದಲ ಓವರ್‌ನಲ್ಲಿ ಶೂನ್ಯಕ್ಕೆ ಔಟಾದರು. ನಂತರ ಮುರಿಯದ ಎರಡನೇ ವಿಕೆಟಿಗೆ ನಾಯಕ ಋತುರಾಜ್‌ ಗಾಯಕ್‌ವಾಡ್‌ ಮತ್ತು ತಿಲಕ್‌ ವರ್ಮಾ 52 ಎಸೆತಗಳಲ್ಲಿ 97 ರನ್‌ ಜೊತೆಯಾಟವಾಡಿ ಜಯ ತಂದುಕೊಟ್ಟರು.

ಗಾಯಕ್‌ವಾಡ್‌ 40 ರನ್‌ (26 ಎಸೆತ, 4 ಬೌಂಡರಿ, 3 ಸಿಕ್ಸರ್‌), ತಿಲಕ್‌ ವರ್ಮಾ 55 ರನ್‌(26 ಎಸೆತ, 2 ಬೌಂಡರಿ, 6 ಸಿಕ್ಸರ್‌) ಹೊಡೆದರು.

ಬಾಂಗ್ಲಾ ಪರ ಪರ್ವೇಜ್ ಹೊಸೈನ್ ಎಮಾನ್ 23 ರನ್‌, ಜೇಕರ್ ಅಲಿ ಔಟಾಗದೇ 24 ರನ್‌ ಹೊಡೆದರು.‌ ಭಾರತದ ಪರ ಸಾಯಿ ಕಿಶೋರ್ 3 ವಿಕೆಟ್‌, ವಾಷಿಂಗ್ಟನ್‌ ಸುಂದರ್‌ 2 ವಿಕೆಟ್‌ ಕಿತ್ತರೆ, ಅರ್ಶ್‌ದೀಪ್‌ ಸಿಂಗ್‌ ತಿಲಕ್‌ ವರ್ಮಾ , ರವಿ ಬಿಶ್ಣೋಯಿ, ಶಹಬಾಜ್‌ ಅಹ್ಮದ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section