ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆದ್ದ ದೀಪಿಕಾ- ಹರಿಂದರ್ ಜೋಡಿ..!

0
107

ಏಶಿಯನ್ ಗೇಮ್ಸ್ 2023: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ಗೆದ್ದುಕೊಂಡಿದೆ.

ಸ್ಕ್ವಾಷ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಲಭಿಸಿದ್ದು, ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಜೋಡಿ ಭಾರತಕ್ಕೆ ಈ ಪದಕವನ್ನು ಗೆದ್ದುಕೊಟ್ಟಿದೆ.

ಈ ಜೋಡಿ ಫೈನಲ್‌ನಲ್ಲಿ ಮಲೇಷ್ಯಾವನ್ನು 2-0 ಅಂತರದಿಂದ ಮಣಿಸಿದ್ದು, ಈ ಮೂಲಕ ಭಾರತಕ್ಕೆ 20ನೇ ಚಿನ್ನದ ಪದಕ ಸಿಕ್ಕಂತಾಗಿದೆ. ಅಲ್ಲದೆ ಇದುವರೆಗೆ ಭಾರತದ ಪದಕಗಳ ಖಾತೆಗೆ 83 ಪದಕಗಳು ಬಿದ್ದಿದ್ದು, ಏಷ್ಯನ್ ಗೇಮ್ಸ್‌ ಇತಿಹಾಸದಲ್ಲಿ ಅಧಿಕ ಪದಕಗಳ ಭೇಟಿಯಾಡಿದ ನೂತನ ದಾಖಲೆಯನ್ನು ಭಾರತದ ಕ್ರೀಡಾಪಟುಗಳು ಸೃಷ್ಟಿಸಿದ್ದಾರೆ.

LEAVE A REPLY

Please enter your comment!
Please enter your name here