ಸುದ್ದಿಗಳು

ಸನಾತನ ಧರ್ಮದ ಬಗ್ಗೆ ದ್ವೇಷಪೂರಿತ ಹೇಳಿಕೆಯ ಪ್ರಕರಣದಲ್ಲಿ ದಾದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು!

ಉದಯನಿಧಿ ಸ್ಟಾಲಿನ್, ನಿಖಿಲ ವಾಗಳೆ , ಜಿತೇಂದ್ರ ಆವ್ಹಾಡ್ ಇವರ ವಿರುದ್ಧ ‘ಹೇಟ್ ಸ್ಪೀಚ್’ನ ಅಪರಾಧ ದಾಖಲಿಸಿ ! – ಹಿಂದುತ್ವನಿಷ್ಠ ಸಂಘಟನೆಗಳ ಬೇಡಿಕೆ

Advertisement
Advertisement
Advertisement

ದಿನಾಂಕ : 4.10.2023

ಸನಾತನ ಧರ್ಮದ ಬಗ್ಗೆ ಆಕ್ಷೇಪಾರ್ಹ ಹಾಗೂ ದ್ವೇಷಪೂರಿತ ಹೇಳಿಕೆಯಿಂದ ಹಿಂದುಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿರುವ ಪ್ರಕರಣದಲ್ಲಿ ತಮಿಳುನಾಡಿನ ಸಚಿವ ಉದಯ ನಿಧಿ ಸ್ಟಾಲಿನ್, ಕರ್ನಾಟಕದ ಗ್ರಾಮಿಣ ವಿಕಾಸ ಸಚಿವ ಪ್ರಿಯಾಂಕ ಖರ್ಗೆ, ತಮಿಳುನಾಡಿನ ದ್ರಮುಕದ ಸಂಸದ ಎ. ರಾಜಾ ಇವರ ಜೊತೆಗೆ ಮಹಾರಾಷ್ಟ್ರದಲ್ಲಿನ ರಾಷ್ಟ್ರವಾದಿ ಕಾಂಗ್ರೆಸ್ಸಿನ ಶಾಸಕ ಜಿತೇಂದ್ರ ಆವ್ಹಾಡ ಮತ್ತು ಪತ್ರಕರ್ತ ನಿಖಿಲ ವಾಗಳೆ ಇವರ ವಿರುದ್ಧ ಹೇಟ್ ಸ್ಪೀಚ್ (ದ್ವೇಷ ಪೂರಿತ ಹೇಳಿಕೆ) ಆರೋಪ ದಾಖಲಿಸಲು ಹಿಂದುತ್ವರಿಷ್ಟರಿಂದ ಆಗ್ರಹಿಸಲಾಗಿದೆ. ಹಿಂದುತ್ವನಿಷ್ಠರು ದಾದರ್ ನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಇದರ ಬಗ್ಗೆ ಲಿಖಿತ ದೂರು ನೀಡಿದ್ದಾರೆ.

ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕೊರೋನಾ , ಏಡ್ಸ್ ಮತ್ತು ಕುಷ್ಠ ರೋಗ ಮುಂತಾದ ರೋಗದ ಜೊತೆಗೆ ತುಲನೆ ಮಾಡಿ ಸನಾತನ ಧರ್ಮವನ್ನು ನಾಶ ಮಾಡುವ ಬಗ್ಗೆ ದ್ರಮುಕ ಪಕ್ಷದ ತಮಿಳನಾಡಿನ ಸಚಿವ ಉದಯ ನಿಧಿ ಸ್ಟಾಲಿನ್, ಕಾಂಗ್ರೆಸ್ ಪಕ್ಷದ ಕರ್ನಾಟಕದ ಗ್ರಾಮೀಣ ವಿಕಾಸ ಸಚಿವ ಪ್ರಿಯಾಂಕ ಖರ್ಗೆ ಮತ್ತು ತಮಿಳುನಾಡಿನ ದ್ರಮುಕ ಪಕ್ಷದ ಸಂಸದ ಎ. ರಾಜ ಇವರು ಮಾತನಾಡಿದ್ದರು. ಅದೇ ರೀತಿ ಪತ್ರಕರ್ತ ನಿಖಿಲ ವಾಗಳೆ ಇವರೂ ಇತ್ತೀಚಿಗೆ ಫೇಸ್ಬುಕ್ ಮೂಲಕ ಉದಯನಿಧಿ ಸ್ಟಾಲಿನ್ ಇವರನ್ನು ನಾನು ಸಮರ್ಥಿಸುತ್ತೇನೆ, ಸನಾತನ ಧರ್ಮ ಒಂದು ರೋಗದಂತಿದೆ ಎಂದು ದ್ವೇಷಪೂರಿತ ಪೋಸ್ಟ್ ಮಾಡಿದ್ದರು. ಹಾಗೂ ರಾಷ್ಟ್ರವಾದಿ ಕಾಂಗ್ರೆಸ್ಸಿನ ಶಾಸಕ ಜಿತೇಂದ್ರ ಆವ್ಹಾಡ್ ಇವರೂ ಸನಾತನ ಧರ್ಮ ಎಂದರೆ ದೇಶಕ್ಕೆ ಅಂಟಿರುವ ಕ್ರಿಮಿ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.

ಯಾವುದೇ ಧರ್ಮದ ಬಗ್ಗೆ ಅಗೌರವವಾಗಿ, ನಿಂದಿಸುವ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ, ಹಾಗೂ ದ್ವೇಷ ಪಸರಿಸುವ, ವೈರತ್ವ ನಿರ್ಮಾಣ ಮಾಡುವುದು ಭಾರತೀಯ ದಂಡ ಸಂಹಿತೆ ಕಲಂ 153(ಅ) ,153 (ಬ), 295 (ಅ ), 298,505 ಹಾಗೂ ಮಾಹಿತಿ ತಂತ್ರಜ್ಞಾನ ಕಾನೂನಿನ ಅಂತರ್ಗತ ಅಪರಾಧವಾಗಿದೆಯೆಂದು ದೂರಿನಲ್ಲಿ ದಾಖಲಿಸಲಾಗಿದೆ. ಆದ್ದರಿಂದ ಸನಾತನ ಧರ್ಮದ ಬಗ್ಗೆ ದ್ವೇಷಪೂರಿತ ಹೇಳಿಕೆ ನೀಡುವವರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಲಾಗಿದೆ. ಇದರ ಬಗ್ಗೆ ದಾದರ್ ನ ಶಿವಾಜಿ ಪಾರ್ಕ್ ಪೊಲೀಸರು ಘಟನೆಯನ್ನು ಖಾತ್ರಿಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ. ಪೊಲೀಸರಿಂದ ಯೋಗ್ಯ ಕ್ರಮ ಕೈಗೊಳ್ಳಲಾಗದಿದ್ದರೆ ಆಗ ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಅವಮಾನ ಆಗಿರುವ ಪ್ರಕರಣದ ಅರ್ಜಿ ದಾಖಲಿಸಲಾಗುವುದೆಂದು ಎಚ್ಚರಿಕೆ ಕೂಡ ಈ ದೂರಿನಲ್ಲಿ ನೀಡಲಾಗಿದೆ.

ಈ ದೂರು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಚಂದ್ರಕಾಂತ ಭಾರ್ದಿಕೆ, ಹಾಗೂ ಹಿಂದುತ್ವನಿಷ್ಠ ಕಾರ್ಯಕರ್ತರಾದ ಶ್ರೀ. ಪ್ರಭಾಕರ ಭೋಸಲೆ, ಪ್ರಸನ್ನ ದೇವರುಖಕರ , ಹಿತೇಂದ್ರ ಪಾಗಧರೆ, ರಾಹುಲ ಭಜಬಳ, ಅಶೋಕ್ ಸೋನಾವಣೆ, ಆಶಿಶ ಪಾಂಡೆಯ, ದಿನೇಶ ಖಾನವಿಲೇಕರ, ಸಾಗರ ಚೋಪದಾರ, ನ್ಯಾಯವಾದಿ ಸುರಭಿ ಸಾವಂತ ಮುಂತಾದ 27 ಜನರು ಸೇರಿ ನೀಡಿದ್ದಾರೆ. ಹೇಟ್ ಸ್ಪೀಚ್ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಮತ್ತು ನ್ಯಾಯಮೂರ್ತಿ ಬಿ ವಿ ನಾಗರಥನ ಇವರು ಏಪ್ರಿಲ್ ೨೮.೨೦೨೩ ರಂದು ಸಮಾಜದಲ್ಲಿ ಯಾರೇ ದ್ವೇಷಪಸರಿಸುವ ಹೇಳಿಕೆ ನೀಡಿ ವಾದವಿವಾದ ನಿರ್ಮಾಣ ಮಾಡುವವರ ವಿರುದ್ಧ ಯಾರೋ ದೂರು ನೀಡುವರೆಂದು ದಾರಿ ನೋಡುತ್ತಾ ಕೂರುವ ಬದಲು ಸರಕಾರ ಸ್ವತಃ ದೂರು ದಾಖಲಿಸಬಹುದು ಎಂದು ಆದೇಶ ನೀಡಿದೆ. ಹೀಗೆ ಮಾಡಲು ವಿಳಂಬವಾದರೆ ಆಗ ಇದನ್ನು ಸರ್ವೋಚ್ಚ ನ್ಯಾಯಾಲಯದ ಅವಮಾನ ಎಂದು ತಿಳಿಯಲಾಗುವುದೆಂದು ಕೂಡ ಅದು ಹೇಳಿದೆ.

ತಮ್ಮ ಸವಿನಯ, ಶ್ರೀ. ರಮೇಶ ಶಿಂದೆ ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ (ಸಂಪರ್ಕ : 9987966666 )

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago