ಕರಾವಳಿ

ಬಂಟ್ವಾಳ ತುಂಬೆ ಡ್ಯಾಂ ಸಂತ್ರಸ್ಥ ಕೃಷಿಕರ ಗೋಳು ಕೇಳೋರ್ಯಾರು..!

ಬಂಟ್ವಾಳ, ಅ.4 : ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಮ್‌ನಿಂದ ಹೊರ ಹೋಗುತ್ತಿರುವ ನೀರಿನ ಅಲೆಗಳ ಅಪ್ಪಳಿಸುವಿಕೆಯಿಂದ ತುಂಬೆ ಗ್ರಾಮದಲ್ಲಿ ಕೃಷಿ ಭೂಮಿ ನಿರಂತರವಾಗಿ ನದಿ ಪಾಲಾಗುತ್ತಿದ್ದು ಜೋಪಾನದಿಂದ ಪೋಷಿಸಿದ್ದ ತೆಂಗು, ಅಡಿಕೆ ಕೃಷಿ ನೀರುಪಾಲಾಗುತ್ತಿದ್ದು ಕೃಷಿಕರ ಗೋಳು ಅರಣ್ಯರೋದನವಾಗಿದೆ.

Advertisement
Advertisement
Advertisement

ತಡೆಗೋಡೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ ಮಂಗಳೂರು ಮಹಾನಗರಪಾಲಿಕೆಯ ವಿಳಂಬ ನೀತಿಯಿಂದ ದಿನ ಕಳೆದಂತೆ ಮತ್ತಷ್ಟು ಕೃಷಿ ಭೂಮಿ ನದಿ ಪಾಲಾಗುತ್ತಿದೆ.

ಡ್ಯಾಂನ್ನು 6 ಮೀ.ಗೆ ಏರಿಸಿದ ಬಳಿಕ ಈ ಸಮಸ್ಯೆ ಹೆಚ್ಚಾಗಿದ್ದು, ಕಳೆದ ಹಲವು ವರ್ಷಗಳಿಂದ ಕೃಷಿಕರು ಸಂಬಂಧಪಟ್ಟವರಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಾರೆ.

ಆದರೆ ತಡೆಗೋಡೆ ನಿರ್ಮಿಸುವ ಕುರಿತು ಯಾರೂ ಕೂಡ ಗಮನಹರಿಸದೇ ಇರುವುದರಿಂದ ದಿನ ಕಳೆದಂತೆ ಭೂಮಿ ಕುಸಿತ ಮುಂದುವರಿಯುತ್ತಲೇ ಇದೆ.

ಡ್ಯಾಂನ ಗೇಟ್ ತೆರೆದ ಹೆಚ್ಚಿನ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದ್ದು, ಅ ನೀರು ನದಿಯ ಇಕ್ಕೆಲಗಳಿಗೆ ಬಡಿಯುತ್ತಲೇ ಇದೆ. ಹೀಗೆ ಬಡಿಯುತ್ತಿರುವ ಪರಿಣಾಮ ಮಣ್ಣು ಕುಸಿಯುತ್ತಲೇ ಇದ್ದು, ತಳ ಭಾಗದಲ್ಲಿ ಪೂರ್ತಿ ಮಣ್ಣು ಖಾಲಿಯಾಗಿದ್ದು, ಶೀಘ್ರದಲ್ಲಿ ಮತ್ತಷ್ಟು ಭೂಮಿ ಕುಸಿಯಲು ಸಿದ್ಧಗೊಂಡಿದೆ.

ಕಳೆದ 2 ವರ್ಷಗಳ ಹಿಂದೆ ಸುಮಾರು 250ಕ್ಕೂ ಅಧಿಕ ಅಡಿಕೆ ಗಿಡ, ಬಾಳೆ ಗಿಡ, 60ಕ್ಕೂ ಅಡಿಕೆ ತೆಂಗಿನಮರಗಳು ನದಿ ಪಾಲಾಗಿದ್ದು, ಒಂದೂವರೆ ಎಕರೆಯಷ್ಟು ಭೂಮಿ ನದಿ ಪಾಲಾಗಿತ್ತು.

ಆದರೆ ಈಗಿನ ಸ್ಥಿತಿ ಲೆಕ್ಕಚಾರ ಹಾಕಿದರೆ ಅದರ ಪ್ರಮಾಣ 2 ಪಟ್ಟು ಹೆಚ್ಚಾಗಿದ್ದು, 3ರಿಂದ 4 ಎಕರೆಯಷ್ಟು ಕೃಷಿ ಭೂಮಿ ನಾಶವಾಗಿದೆ ಎಂದು ಕೃಷಿಕರು ಆರೋಪಿಸುತ್ತಿದ್ದಾರೆ.

ತುಂಬೆ ಡ್ಯಾಮ್‌ನಲ್ಲಿ ಸದ್ಯಕ್ಕೆ ಎರಡು ಗೇಟ್‌ಗಳ ಮೂಲಕ ನೀರು ಹೊರಕ್ಕೆ ಹೋಗುತ್ತಿದ್ದು, ಬರೀ ಎರಡೇ ಗೇಟ್ ತೆರೆದಿದ್ದರೂ ಅಲೆಗಳ ಹೊಡೆತ ಜೋರಾಗಿಯೇ ಇದೆ.

ಈ ಕೂಡಲೇ ಜನಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿ ಸ್ಥಳಿಯ ಕೃಷಿಕರು ಆಗ್ರಹಿಸಿದ್ದಾರೆ.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago