ಪುತ್ತೂರು,ಅ.4 : 154ನೇ ಗಾಂಧಿ ಜಯಂತಿಯ ಪ್ರಯುಕ್ತ ಪುತ್ತೂರು ಇಲ್ಲಿನ ಒಳಿತು ಮಾಡು ಮನುಷ ತಂಡದ ಮುಂದಾಳತ್ವದಲ್ಲಿ ಜೆಸಿಐ ಪುತ್ತೂರು,ರೋಟರಿ ಕ್ಲಬ್ ಪುತ್ತೂರುಎಲೈಟ್, ಪುತ್ತೂರು ಪೂರ್ವ, ಪುತ್ತೂರು ಸಿಟಿ, ಪುತ್ತೂರು ಸೆಂಟ್ರಲ್, ಪುತ್ತೂರು ಬಿರುಮಲೆ ಹಿಲ್, ಲಯನ್ಸ್ ಕ್ಲಬ್ ಪುತ್ತೂರು, ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಪುತ್ತೂರು, ಶ್ರೀ ವಿಷ್ಣು ಯುವಕ ಮಂಡಲ ರಿ.ಕೆಮ್ಮಾಯಿ, ಶ್ರೀ ಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್ ರಿ.ಪುತ್ತೂರು ಹಾಗೂ ಓಂ ನ್ಯೂಸ್ ಬಳಗ ಪುತ್ತೂರು ಸಂಯುಕ್ತ ಆಶ್ರಯದಲ್ಲಿ ಊರ-ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ-ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ಆಹಾರ ಸಾಮಾಗ್ರಿಗಳ ಕಿಟ್ ನೀಡುವ 26 ನೇ ಒಳಿತು ಮಾಡು ಮನುಷ ಯೋಜನೆ ಕಾರ್ಯಕ್ರಮ,ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಭಾಗಿತ್ವದಲ್ಲಿ ಆಧಾರ್ ನೋಂದಣಿ ಮತ್ತು ಪರಿಷ್ಕರಣೆ ಶಿಬಿರ,ಇದರೊಂದಿಗೆ ಕೆನರಾ ಬ್ಯಾಂಕ್ ಪುತ್ತೂರು ಸಹಭಾಗಿತ್ವದಲ್ಲಿ ಅಟಲ್ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯ ಮಾಹಿತಿ ಮತ್ತು ನೋಂದಣಿ,ವಿಷನ್ ಐ ಕೇರ್ ಆಪ್ಟಿಕಲ್ಸ್ ಪುತ್ತೂರು ಸಹಭಾಗಿತ್ವದಲ್ಲಿ ನೇತ್ರದಾನ ನೋಂದಣಿ ಶಿಬಿರ ಮತ್ತು ಉಚಿತ ಕಣ್ಣಿನ ಚಿಕಿತ್ಸಾ ತಪಸಣಾ ಶಿಬಿರ, ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಪುತ್ತೂರು ಸಹಭಾಗಿತ್ವದಲ್ಲಿ ಉಚಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣೆ ಕಾರ್ಯಕ್ರಮವು ಅ.2 ಸೋಮವಾರದಂದು ಪುತ್ತೂರಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು .
ಕಾರ್ಯಕ್ರಮವನ್ನು ಸಭಾ ಅತಿಥಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು ಹಾಗೂ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.
ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಚೇತನ್ ಕುಮಾರ್ ರವರು ಮಾತನಾಡಿ ಪರರ ಸೇವೆಯಲ್ಲಿ ಪರಮಾತ್ಮನನ್ನು ಕಾಣುತ್ತಿದ್ದೇನೆ,ಇಂತಹ ಹಲವಾರು ಕಾರ್ಯಗಳನ್ನು ಮಾಡಲು ನಿಮ್ಮೆಲ್ಲರ ಸಹಕಾರ ಬೇಕು, ತಮ್ಮ ತಂಡಕ್ಕೆ ಹಾಗೂ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಾಂದೀಪನಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಜಯರಾಮ ಕೆದಿಲಾಯ ಮಾತನಾಡಿ “ನಾವು ಗಳಿಸಿದ ಒಂದು ಭಾಗವನ್ನು ಕಷ್ಟದಲ್ಲಿರುವವರಿಗೆ ದಾನಮಾಡಬೇಕು. ಇದರಿಂದ ನಮ್ಮ ಶಕ್ತಿ ಜಾಸ್ತಿಯಾಗುತ್ತದೆ,23 ವರ್ಷಗಳಿಂದ ಸಮಾಜ ಸೇವೆಯೆಂಬ ವ್ರತ ಕೈಗೊಂಡಿದ್ದೇನೆ.ಇನ್ನು ಮುಂದೆಯೂ ಸಮಾಜ ಸೇವೆಯಲ್ಲಿ ಭಾಗಿಯಾಗುತ್ತೇನೆ” ಸಮಾಜದಲ್ಲಿ ಅಶಕ್ತ ಕುಟುಂಬಗಳಿಗೆ ಕೈ ಜೋಡಿಸುತ್ತಿರುವ ನಿಮಗೆ ಶುಭವಾಗಲಿ ಎಂದರು.
ರೋಟರಿ ಪುತ್ತೂರು ಸೆಂಟ್ರಲ್ ಅಧ್ಯಕ್ಷರಾದ ರಾಜೇಶ್ ಬೆ ಜ್ಜಂಗಳ ‘ಗಾಂಧೀಜಿಯ ಅಹಿಂಸಾ ಹೋರಾಟದ ಬಗ್ಗೆ ತಿಳಿಹೇಳಿದರು, ಅಹಿಂಸೆ ಎಂದರೆ ಕೇವಲ ಬೇರೆಯವರ ಶರೀರಕ್ಕೆ ಮಾಡುವ ಗಾಯವಲ್ಲ, ಮಾತಿನಲ್ಲಿ ಬರೆ ಎಳೆಯುವುದು ಕೂಡ ಅಹಿಂಸೆಯೆ…ದಾನವೆಂಬುದು ವಿಪತ್ತು ಗಳಿಂದ ರಕ್ಷಿಸುತ್ತದೆ ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕಾಮಧೇನು ಗೋಲ್ಡ್ ಪ್ಯಾಲೇಸ್ ಮಾಲೀಕರಾದ ಮಾಧವ ಗೌಡರವರು ಮಾತನಾಡಿ ತನ್ನ ಸಾಧನೆಯ ಮುಖಾಂತರ ಹಲವು ಸಂಸ್ಥೆಯನ್ನು ಸ್ಥಾಪಿಸಿದ ಮತ್ತು ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಅನುಭವ ಹಂಚಿಕೊಂಡರು.ಹಾಗೂ ಒಳಿತು ಮಾಡು ಮನುಷ ತಂಡಕ್ಕೆ ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದರು.
ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ಅಧ್ಯಕ್ಷರಾದ ಬುಡಿಯಾರ್ ರಾಧಾಕೃಷ್ಣ ರೈ ಮಾತನಾಡಿ ಸರಕಾರದ ಯೋಜನೆಗಳ ಬಗ್ಗೆ ತಿಳಿಹೇಳಿದರು. ದಾನವೆಂಬುದು ದೇವರು ಮೆಚ್ಚುವ ಕೆಲಸ, ದೊಡ್ಡ ಮಟ್ಟದಲ್ಲಿ ಸಂಸ್ಥೆಯು ಬೆಳೆಯಲಿ ಎಂದು ಶುಭ ಹಾರೈಸಿದರು.
ರೋಟರಿ ಕ್ಲಬ್ ಪುತ್ತೂರು ಎಲೈಟ್ ಇದರ ಅಧ್ಯಕ್ಷರಾದ ಅಬ್ದುಲ್ ರಜಾಕ್ ಕಬಕಾಕರ್ಸ್, ನಿವೃತ್ತಿ ಸಬ್ಇನ್ಸ್ಪೆಕ್ಟರ್ ವಿಠಲ್ ಶೆಟ್ಟಿ ಮತ್ತು ನಿವೃತ್ತಿ ಪಿಡಿಒ ಪದ್ಮಯ್ಯರವರು ಮಾತನಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ನೆರೆದ ಎಲ್ಲಾ ಅತಿಥಿಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಶೋಭಾ ಮಡಿವಾಳ,ಗೌರವಾಧ್ಯಕ್ಷರಾದ ಶರತ್ ಕುಮಾರ್, ಕಾರ್ಯದರ್ಶಿ ಮೋಹನ ಸಿಂಹವನ, ಸಂಘಟನಾಧ್ಯಕ್ಷರಾದ ಜಯರಾಜ್ ಅಮೀನ್, ಉಪಾಧ್ಯಕ್ಷರಾದ ವಿಜಯ ಕುಮಾರ್,ಶ್ರೀಮತಿ ಸರಸ್ವತಿ, ಸದಸ್ಯರಾದ ಶ್ರೀಮತಿ ಕಾವ್ಯ,ಗಣ್ಯಶ್ರೀ,ಪುಣ್ಯಶ್ರೀ,ಅಶ್ವಿನಿ,ದೀಕ್ಷಾ,ಕೃಪಾ,ಭವ್ಯ ಡಿಸೋಜ, ಅಕ್ಷಯ್ ಕುಲಾಲ್,ಗೀತಾ, ಪ್ರಣವ್ ಮತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಆಶಾ,ರಕ್ಷಾ,ಮನಿಷಾ ನೆರವೇರಿಸಿದರು, ಸ್ವಾಗತವನ್ನು ಶೃತಿಕಾ ನಿರ್ವಹಿಸಿದರು,ಸಂಚಾಲಕರಾದ ಕಲಾವಿದ ಕೃಷ್ಣಪ್ಪ ಶಿವನಗರ ಕಾರ್ಯಕ್ರಮವನ್ನು ನಿರೂಪಿಸಿದರು.
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…