ನವದೆಹಲಿ: ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಕುರಿತಂತೆ ಭಾರತದ ಮೇಲೆ ಆರೋಪ ಮಾಡಿದ ಬಳಿಕ ಕೆನಡಾ ಜೊತೆಗಿನ ಸಂಬಂಧದಲ್ಲಿ ಬಿರುಕು ಮೂಡಿದೆ. ಈ ಬೆನ್ನಲ್ಲೇ ಇದೀಗ ಭಾರತವು ಕೆನಾಡಾಗೆ ಗಡುವು ನೀಡುವ ಮೂಲಕ ಎಚ್ಚರಿಕೆಯನ್ನೂ ನೀಡಿದೆ.
ಅಕ್ಟೋಬರ್ 10 ರೊಳಗೆ 40 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಿ. ಒಂದು ವೇಳೆ ಅಕ್ಟೋಬರ್ 10ರ ಬಳಿಕವೂ ಅಧಿಕಾರಿಗಳು ಇಲ್ಲಿಯೇ ಉಳಿದರೆ ಅವರ ಎಲ್ಲಾ ವಿನಾಯ್ತಿಗಳನ್ನು ರದ್ದುಪಡಿಸುವುದಾಗಿ ನರೇಂದ್ರ ಮೋದಿ ಸರ್ಕಾರ ಎಚ್ಚರಿಕೆಯನ್ನು ನೀಡಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭಿಸಿರುವ ಬಗ್ಗೆ ವರದಿಯಾಗಿದೆ.
ಕೆನಾಡವು ಭಾರತದಲ್ಲಿ 62 ರಾಜತಾಂತ್ರಿಕರನ್ನು ಹೊಂದಿದೆ. ಆದರೆ ಭಾರತ ಇದನ್ನು 41ಕ್ಕೆ ಕಡಿತಗೊಳಿಸಬೇಕು ಎಂದು ಹೇಳಿತ್ತು. ಕೆನಡಾದಲ್ಲಿ ಖಲಿಸ್ತಾನಿ ಉಗ್ರನ ಹತ್ಯೆಯ ಬಳಿಕ ಭಾರತದ ವಿರುದ್ಧ ಆರೋಪ ಮಾಡಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹಳಸುತ್ತಾ ಬಂದಿದೆ. ಹೀಗಾಗುತ್ತಿದ್ದಂತೆಯೇ ಕೆನಡಾದಲ್ಲಿ ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಕಡಿಮೆಗೊಳಿಸುವಂತೆ ಭಾರತವು ಈ ಹಿಂದೆ ಕೆನಡಾವನ್ನು ಕೇಳಿಕೊಂಡಿತ್ತು.