ಟೀಮ್ ಒಳಿತು ಮಾಡು ಮನುಷ ತಂಡದಿಂದ
ಉಚಿತ ಕಣ್ಣಿನ ತಪಾಸಣೆ,ಹಾಗೂ ಆಧಾರ್ ನೋಂದಣಿ ಮತ್ತು ಅಪಘಾತ ವಿಮೆ ನೋಂದಾವಣಾ ಶಿಬಿರ

ಪುತ್ತೂರಿನ ಟೀಮ್ ಒಳಿತು ಮಾಡು ಮನುಷ ತಂಡದ ಮುಂದಾಳತ್ವದಲ್ಲಿ ಜೆಸಿಐ ಪುತ್ತೂರು,ರೋಟರಿಕ್ಲಬ್ ಪುತ್ತೂರು ಎಲೈಟ್ ,ಪುತ್ತೂರು ಪೂರ್ವ,ಪುತ್ತೂರು ಸಿಟಿ,ಪುತ್ತೂರು ಸೆಂಟ್ರಲ್, ಪುತ್ತೂರು ಸ್ವರ್ಣ,ಪುತ್ತೂರು ಬೀರುಮಲೆ ಹಿಲ್, ಲಯನ್ಸ್ ಕ್ಲಬ್ ಪುತ್ತೂರು,ಭಾರತೀಯ ರೆಡ್ ಕ್ರಾಸ್ ಸೊಸೈಟಿ ಪುತ್ತೂರು,ಶ್ರೀ ವಿಷ್ಟು ಯುವಕ ಮಂಡಲ (ರಿ.) ಕೆಮ್ಮಾಯಿ, ಶ್ರೀ ಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್ ಪುತ್ತೂರು ಹಾಗೂ ಓಂ ನ್ಯೂಸ್ ಬಳಗ ಪುತ್ತೂರು ಜಂಟಿ ಅಶ್ರಯದಲ್ಲಿ

ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಭಾಗಿತ್ವದಲ್ಲಿ
ಆಧಾರ್ ನೋಂದಣಿ ಮತ್ತು ಪರಿಷ್ಕರಣೆ

ಹಾಗೂ ಕೆನರಾ ಬ್ಯಾಂಕ್ ಪುತ್ತೂರು ಸಹಯೋಗದಲ್ಲಿ ಅಟಲ್ ಪಿಂಚಣಿ ಯೋಜನೆ,ಪ್ರದಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ,ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯ ಮಾಹಿತಿ ಮತ್ತು ನೋಂದಣಿ ಹಾಗೂ

ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಆಚರಣೆ, ಸಕ್ಷಮ ಪುತ್ತೂರು ಮತ್ತು ವಿಷನ್ ಐ ಕೇರ್ ಆಪ್ಟಿಕಲ್ಸ್ ಪುತ್ತೂರು ಸಹಭಾಗಿತ್ವದಲ್ಲಿ ನೇತ್ರದಾನ ನೋಂದಣಿ ಶಿಬಿರ ಮತ್ತು ಉಚಿತ ಕಣ್ಣಿನ ಚಿಕಿತ್ಸಾ ತಪಾಸಣಾ ಶಿಬಿರ,

ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ ಪುತ್ತೂರು ಸಹಭಾಗಿತ್ವ ದಲ್ಲಿ ಉಚಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣೆ ನಡೆಯಲಿದೆ ಅಲ್ಲದೆ ಈ ಕಾರ್ಯಕ್ರಮಕ್ಕೆ ಮೊದಲು ಆಗಮಿಸಿದ 100 ಜನರಿಗೆ ಉಚಿತವಾಗಿ 2 ಲಕ್ಷ ಮೌಲ್ಯದ ಅಪಘಾತ ವಿಮೆಯನ್ನು ಮಾಡಿಕೊಡಲಾಗುವುದು.

ಇದರೊಂದಿಗೆ ಟೀಮ್ ಒಳಿತು ಮಾಡು ಮನುಷ ತಂಡ ಮತ್ತು ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹಾಗೂ ಅನಾರೋಗ್ಯ ಪೀಡಿತರಿಗೆ 26 ನೇ ಯೋಜನೆಯಾಗಿ ಆಹಾರ ಸಾಮಗ್ರಿಗಳ ವಿತರಣ ಕಾರ್ಯಕ್ರಮವು ಪುತ್ತೂರಿನ
ಲಯನ್ಸ್ ಸೇವಾ ಮಂದಿರದಲ್ಲಿ ಬೆಳಿಗ್ಗೆ 9 ರಿಂದ 2ರ ವರೆಗೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

