ಜ.26ಕ್ಕೆ ‘ಅನರ್‌ ಕಲಿ’ ತುಳು ಸಿನಿಮಾ ತೆರೆಗೆ

0
110

ಮಂಗಳೂರು: ಲಕುಮಿ ಸಿನಿ ಕ್ರಿಯೇಷನ್ಸ್‌ನ ‘ಅನರ್ ಕಲಿ’ ತುಳು ಸಿನಿಮಾ ಜನವರಿ 26ರಂದು ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಹರ್ಷಿತ್ ಸೋಮೇಶ್ವರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತುಳುನಾಡಿನ ವೇಷ, ಸಂಸ್ಕೃತಿಯನ್ನುಆಧರಿಸಿ ಕಥೆ ಹೆಣೆಯಲಾಗಿದೆ.

ಕಟೀಲು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ನಾಲ್ಕು ಹಾಡುಗಳು ಇವೆ. ನಟ ಶೋಭರಾಜ್ ಪಾವೂರು ನಾಯಕ ನಟನಾಗಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ದೀಪಕ್ ರೈ ಪಾಣಾಜೆ, ರವಿ ರಾಮಕುಂಜ, ಪುಷ್ಪರಾಜ್ ಬೊಲ್ವರ್, ಪ್ರಕಾಶ್ ಶೆಟ್ಟಿ ಧರ್ಮನಗರ, ಮಧುರಾ, ವಾತ್ಸಲ್ಯ ಮತ್ತಿತರರು ಮುಖ್ಯ ಭೂಮಿಕೆಯಲ್ಲಿದ್ದಾರೆ. 100ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ಚಿತ್ರೀಕರಣ ಪೂರ್ಣಗೊಂಡು, ಟೀಸರ್ ಬಿಡುಗಡೆಯಾಗಿದೆ ಎಂದರು.

ಪ್ರಜ್ವಲ್ ಸುವರ್ಣ ಸಂಕಲನ, ರೋಹಿತ್ ಪೂಜಾರಿ ಸಂಗೀತ, ಅರುಣ್ ರೈ ಪುತ್ತೂರು, ಅನಿಲ್ ಛಾಯಾಗ್ರಹಣಕ್ಕೆ ಸಹಕರಿಸಿದ್ದಾರೆ. ಚಿತ್ರ ಪ್ರೇಕ್ಷಕರ ಮನ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.

ಸಹ ನಿರ್ಮಾಪಕ ರಜನೀಶ್ ಕೋಟ್ಯಾನ್, ಆಶಿಕ್ ಗೋಪಾಲಕೃಷ್ಣ ಇದ್ದರು.

LEAVE A REPLY

Please enter your comment!
Please enter your name here