ರಾಜ್ಯ

ಬೃಹತ್ ಸೈಬರ್ ಕ್ರೈಂ ಜಾಲವನ್ನು ಪತ್ತೆ ಹಚ್ಚಿದ ಬೆಂಗಳೂರಿನ ಪೊಲೀಸ್

ಬೆಂಗಳೂರು: ಪೊಲೀಸರು ಬೆಂಗಳೂರಿನಲ್ಲಿ ಬೃಹತ್ ಸೈಬರ್ ಕ್ರೈಂ ಜಾಲವನ್ನು ಪತ್ತೆ ಹಚ್ಚಿದ್ದು, ಸಾವಿರಾರು ಕೋಟಿ ಲೂಟಿ ಮಾಡುತ್ತಿದ್ದ ಗ್ಯಾಂಗ್ ಅನ್ನು ಪತ್ತೆ ಹಚ್ಚಿ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಗ್ಯಾಂಗ್ ದೇಶಾದ್ಯಂತ ಸುಮಾರು 854 ಕೋಟಿ ರೂ. ಲೂಟಿ ಮಾಡಿದ್ದು, ಬೆಂಗಳೂರಿನಲ್ಲಿ 17 ಪ್ರಕರಣಗಳು ದಾಖಲಾಗಿವೆ. ವಿದ್ಯಾರಣ್ಯಪುರ ಮೂಲದ ಮನೋಹರ್ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ದೇಶದ ಹಲವೆಡೆ 5,013 ಪ್ರಕರಣ ದಾಖಲಾಗಿದ್ದು, ಸದ್ಯ 5 ಕೋಟಿ ರೂ. ಹಣವನ್ನು ಸೈಬರ್ ಕ್ರೈಂ ಪೊಲೀಸರು ಫ್ರೀಜ್ ಮಾಡಿದ್ದಾರೆ.

ಆರೋಪಿಗಳು ವಿದೇಶದಲ್ಲಿ ಇದ್ದುಕೊಂಡು ಬೆಂಗಳೂರಿನಿಂದ ಅಕೌಂಟ್‌ಗಳನ್ನು ಮ್ಯಾನೇಜ್ ಮಾಡುತ್ತಿದ್ದರು. ಬೆಂಗಳೂರಿನ ಗ್ಯಾಂಗ್ ವಿದೇಶದಲ್ಲಿ ಇರುವವರಿಗೆ ಸಹಾಯ ಮಾಡುತ್ತಿತ್ತು. ಮನೋಜ್ ಅಲಿಯಾಸ್ ಜಾಕ್, ಫಣೀಂದ್ರ, ವಸಂತ್, ಶ್ರೀನಿವಾಸ, ಚಕ್ರಾದರ್ ಅಲಿಯಾಸ್ ಚಕ್ರಿ, ಸೋಮಶೇಖರ್ ಅಲಿಯಾಸ್ ಅಂಕಲ್ ಬಂಧಿತ ಆರೋಪಿಗಳು. ಬೆಂಗಳೂರಿನ ವಿದ್ಯಾರಣ್ಯಪುರ, ಯಲಹಂಕ, ಭಾಗದಲ್ಲಿ ವಾಸವಾಗಿದ್ದ ಆರೋಪಿಗಳು ವಿದೇಶದಿಂದ ಬರುವ ಆದೇಶದಂತೆ ಬ್ಯಾಂಕ್ ಅಕೌಂಟ್‌ಗಳನ್ನು ಮ್ಯಾನೇಜ್ ಮಾಡುತ್ತಿದ್ದರು.

ವಾಟ್ಸಪ್ ಮತ್ತು ಟೆಲಿಗ್ರಾಂ ಮೂಲಕ ಭಾರತದಾದ್ಯಂತ ಜಾಬ್ ಆಫರ್ ಮೆಸೇಜ್‌ಗಳನ್ನು ಕಳುಹಿಸಲಾಗುತ್ತಿತ್ತು. ಮೆಸೇಜ್ ಕಳುಹಿಸಲು ಮತ್ತು ಸಾರ್ವಜನಿಕರ ಜೊತೆ ಸಂವಹನ ನಡೆಸಲು ಬೇರೆನೇ ತಂಡ ಇತ್ತು. ಪಾರ್ಟ್ ಟೈಮ್ ಜಾಬ್, ಗೂಗಲ್‌ನಲ್ಲಿ ಹೋಟೆಲ್ ಸೇರಿ ವಿವಿಧ ಶಾಪ್‌ಗಳಿಗೆ ಸ್ಟಾರ್ ರೇಟಿಂಗ್ ನೀಡಿ ಗೂಗಲ್ ರಿವ್ಯೂ ಹಾಕುವಂತೆ ಹೇಳುತ್ತಿದ್ದರು. ಈ ರೀತಿ ಮಾಡಿದರೆ ಹಣ ನೀಡುತ್ತೇವೆ ಎಂದು ನಂಬಿಸಿ ಬಳಿಕ ಟೆಲಿಗ್ರಾಂ ಗ್ರೂಪ್‌ನಲ್ಲಿ ಸೇರಿಸುತ್ತಿದ್ದರು. ಆರೋಪಿಗಳು ಸೇರಿದ್ದ ಟೆಲಿಗ್ರಾಂ ಗ್ರೂಪ್‌ನಲ್ಲಿ ಕ್ರಿಪ್ಟೋ ಕರೆನ್ಸಿಗೆ ಸಂಬಂಧ ಪಟ್ಟು ಹೂಡಿಕೆ ಮಾಡಲು ಪ್ರೇರಣೆ ಮಾಡಲಾಗುತ್ತಿತ್ತು.

ಒಂದು ಸಾವಿರದಿಂದ ಹತ್ತು ಸಾವಿರ ಹೂಡಿಕೆ ಮಾಡಲು ಹೇಳುತ್ತಿದ್ದರು. ಇಷ್ಟು ಹೂಡಿಕೆ ಮಾಡಿದರೆ ದಿನಕ್ಕೆ ಸಾವಿರದಿಂದ ಐದು ಸಾವಿರ ಹಣ ಬರುತ್ತೆ ಎಂದು ಹೇಳಿ ಪ್ರಾರಂಭದಲ್ಲಿ ಹಣ ನೀಡುತ್ತಿದ್ದರು. ಗ್ರೂಪ್‌ನಲ್ಲಿ ಇದ್ದವರು ತಮಗೆ ಇಂತಿಷ್ಟು ಲಾಭ ಬಂದಿದೆ ಎಂದೆಲ್ಲಾ ಮಾಹಿತಿ ಹಂಚಿಕೊಳ್ಳುವ ಮೂಲಕ ಸಾರ್ವಜನಿಕರ ನಂಬಿಕೆ ಗಳಿಸಿ ಹೂಡಿಕೆ ಮಾಡಿಸುತ್ತಿದ್ದರು. ಒಬ್ಬೊಬ್ಬರಿಂದ ಲಕ್ಷದಿಂದ ಕೋಟಿ ರೂ.ವರೆಗೆ ಹೂಡಿಕೆ ಮಾಡಿಸಲಾಗುತ್ತಿತ್ತು. ಹೀಗೆ ಹೂಡಿಕೆ ಮಾಡಿಸುತಿದ್ದ ಹಣ ಬೆಂಗಳೂರಿನ ವಿವಿಧ ಬ್ಯಾಂಕ್‌ನಲ್ಲಿನ ಕರೆಂಟ್ ಅಕೌಂಟ್‌ಗೆ ಸೇರುತಿತ್ತು. ನಂತರ ಹಣ ವಿದೇಶದ ಬ್ಯಾಂಕ್ ಅಕೌಂಟ್‌ಗೆ ಹೋಗುತ್ತಿತ್ತು. ಬಳಿಕ ಬ್ಯಾಂಕ್ ಅಕೌಂಟ್ ಮ್ಯಾನೇಜ್ ಮಾಡುತ್ತಿದ್ದ ಗ್ಯಾಂಗ್‌ಗೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣ ನೀಡಲಾಗುತ್ತಿತ್ತು. ಈ ಹಣವನ್ನು ವಿದೇಶಿ ಗ್ಯಾಂಗ್ ಹಣವನ್ನು ವಿದೇಶದ ವಿವಿಧ ಕಂಪನಿಯಲ್ಲಿ ಹೂಡಿಕೆ ಮಾಡುತ್ತಿದ್ದರು.

ಬಂಧಿತ ಆರೋಪಿಗಳ ಬಳಿ ಕಂಪ್ಯೂಟರ್, ಮೊಬೈಲ್, ಲ್ಯಾಪ್‌ಟಾಪ್, ಬ್ಯಾಂಕ್ ಅಕೌಂಟ್ ದಾಖಲೆಗಳು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಸ್ವೈಪಿಂಗ್ ಮೆಷಿನ್, ಸಿಮ್ ಕಾರ್ಡ್‌ಗಳು, ಪ್ರಿಂಟರ್, ಚೆಕ್‌ಬುಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago