ಹೊಸ ಬಣ್ಣ, ಕಡಿಮೆ ಬೆಲೆ: ಭಾರತದಲ್ಲಿ ವಿಶೇಷವಾಗಿ ಬಿಡುಗಡೆ ಆಯಿತು ಮೋಟೋ E13

By: Ommnews

Date:

Share post:

ಮೋಟೋರೊಲಾ ಕಂಪನಿ ಈ ವರ್ಷದ ಆರಂಭದಲ್ಲಿ ತನ್ನ ಬಜೆಟ್ ಸ್ಮಾರ್ಟ್‌ಫೋನ್ ಮೋಟೋ E13 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತು. ಅತ್ಯಂತ ಕಡಿಮೆ ಬೆಲೆ ಹಾಗೂ ಆಕರ್ಷಕ ಫೀಚರ್​ಗಳಿಂದ ಕೂಡಿರುವ ಈ ಫೋನಿಗೆ ಉತ್ತಮ ಪ್ರತಿಕ್ರಿಯೆ ಕೂಡ ಕೇಳಿ ಬಂದಿತ್ತು. ಆರಂಭದಲ್ಲಿ ಈ ಫೋನ್ 2GB + 64GB ಮತ್ತು 4GB + 64GB ಯ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಯಿತು. ನಂತರ ಆಗಸ್ಟ್‌ನಲ್ಲಿ 8GB + 128GB ರೂಪಾಂತರವನ್ನು ಪರಿಚಯಿಸಿತು. ಮೋಟೋರೊಲಾ ಇದೀಗ ಭಾರತದಲ್ಲಿ ಮೋಟೋ E13 ಅನ್ನು ಹೊಸ ಬಣ್ಣದ ರೂಪಾಂತರದಲ್ಲಿ ಬಿಡುಗಡೆ ಮಾಡಿದೆ.

Advertisement
Advertisement
Advertisement

ಮೋಟೋ E13 ಹೊಸ ಬಣ್ಣ ಯಾವುದು?

ಮೋಟೋ E13 ಈಗ ಹೊಸ ‘ಸ್ಕೈ ಬ್ಲೂ’ ಬಣ್ಣದ ರೂಪಾಂತರದಲ್ಲಿ ಅನಾವರಣಗೊಂಡಿದೆ. ಇದು 8GB + 128GB ಮಾದರಿಗೆ ಮಾತ್ರ ಲಭ್ಯವಿದೆ. ಈ ಸ್ಮಾರ್ಟ್​ಫೋನ್ ಈಗಾಗಲೇ ಕೆನೆ ವೈಟ್, ಅರೋರಾ ಗ್ರೀನ್ ಮತ್ತು ಕಾಸ್ಮಿಕ್ ಬ್ಲ್ಯಾಕ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಮಾರಾಟ ಕಾಣುತ್ತಿದೆ. ಮೋಟೋರೊಲಾ X ನಲ್ಲಿ ಹೊಸ ಬಣ್ಣದ ಆಯ್ಕೆಯನ್ನು ಘೋಷಿಸಿದೆ. ಜೊತೆಗೆ ವಿಶೇಷ ಆಫರ್ ಕೂಡ ಪ್ರಕಟಿಸಿದೆ.

ಮೋಟೋ E13 ಸ್ಮಾರ್ಟ್​ಫೋನ್ 6,749 ರೂ. ಗೆ ವಿಶೇಷ ಬೆಲೆಯೊಂದಿಗೆ ಲಭ್ಯವಿರುತ್ತದೆ. ಇದರ ಮೂಲ ಬೆಲೆ 8,999 ರೂ. ಆಗಿದೆ. ಈ ರಿಯಾಯಿತಿಯು ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಿರುತ್ತದೆ. ಮೊಟೊರೊಲಾ ವೆಬ್‌ಸೈಟ್ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಖರೀದಿಸಬಹುದು. ಅಕ್ಟೋಬರ್ 8 ರಂದು ಪ್ರಾರಂಭವಾಗಲಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2023 ರಲ್ಲೂ ಈ ಫೋನ್ ಖರೀದಿಸಬಹುದು.

ಮೋಟೋ E13 ಫೀಚರ್ಸ್:

ಡಿಸ್‌ಪ್ಲೇ: ಮೋಟೋ E13 ಸ್ಮಾರ್ಟ್​ಫೋನ್ 6.5-ಇಂಚಿನ IPS LCD ಡಿಸ್‌ಪ್ಲೇ ಜೊತೆಗೆ 20:9 ಅನುಪಾತವನ್ನು ಹೊಂದಿದೆ.

ಪ್ರೊಸೆಸರ್: ಈ ಫೋನ್‌ ಯುನಿಸಾಕ್ T606 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ.

RAM ಮತ್ತು ಸಂಗ್ರಹಣೆ: ಇದು 2GB + 64GB, 4GB + 64GB, ಮತ್ತು 8GB + 128GB ಯ ಮೂರು ಶೇಖರಣಾ ರೂಪಾಂತರಗಳಲ್ಲಿ ಬರುತ್ತದೆ.

ಕ್ಯಾಮೆರಾಗಳು: ಈ ಸ್ಮಾರ್ಟ್​ಫೋನ್ 13MP ಪ್ರಾಥಮಿಕ ಕ್ಯಾಮೆರಾ ಮತ್ತು 5MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ: ಮೋಟೋ E13 10W ಚಾರ್ಜಿಂಗ್ ವೇಗದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಸಾಫ್ಟ್‌ವೇರ್: ಈ ಫೋನ್ ಆಂಡ್ರಾಯ್ಡ್ 13 (Go Edition) ಮೂಲಕ ರನ್ ಆಗುತ್ತದೆ.

ಇತರೆ ವೈಶಿಷ್ಟ್ಯಗಳು: IP52 ರೇಟಿಂಗ್ (ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ), 3.5mm ಹೆಡ್‌ಫೋನ್ ಜ್ಯಾಕ್, USB ಟೈಪ್-ಸಿ ಪೋರ್ಟ್, ಡಾಲ್ಬಿ ಅಟ್ಮಾಸ್ ಮತ್ತು ಬ್ಲೂಟೂತ್ 5.0.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section