ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಖ್ಯಾತ ಹಿರಿಯ ನಟಿ ವಹೀದಾ ರೆಹಮಾನ್

0
113

ಬಾಲಿವುಡ್ ನ ಹೆಸರಾಂತ ಹಿರಿಯ ನಟಿ, ನೃತ್ಯಗಾರ್ತಿ ವಹೀದಾ ರೆಹಮಾನ್ ಅವರಿಗೆ 2023ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ಕುರಿತು ಕೇಂದ್ರ ಸಚಿವ ಅನುರಾಗ್ ಠಾಕೋರ್ ಕೂಡ ಟ್ವೀಟ್ ಮಾಡಿ, ಹಿರಿಯ ನಟಿಯನ್ನು ಅಭಿನಂದಿಸಿದ್ದಾರೆ.

ಅಪ್ರತಿಮ ಸುಂದರಿ ಮತ್ತು ಅದ್ಭುತ ನಟಿಯಾಗಿರುವ ವಹೀದಾ ರೆಹಮಾನ್, ಮೂಲತಃ ದಕ್ಷಿಣ ಭಾರತದವರು. ಬಾಲಿವುಡ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಇಡೀ ದೇಶವನ್ನೇ ಬೆರಗುಗೊಳಿಸುವಂತೆ ಮಿಂಚಿದರು. ತೆಲುಗು ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ವಹೀದಾ ನಂತರ ತಮಿಳಿನಲ್ಲೂ ಸಿನಿಮಾ ಮಾಡಿದರು. ಅಲ್ಲಿಂದ ಸೀದಾ ಹೊರಟಿದ್ದು ಬಾಲಿವುಡ್ ನತ್ತ.

ಬಾಲಿವುಡ್ ನ ಸೂಪರ್ ಸ್ಟಾರ್ ಗಳಾದ ರಾಜೇಶ್ ಖನ್ನಾ, ರಾಜ್ ಕಪೂರ್, ಅಮಿತಾಬ್ ಬಚ್ಚನ್, ದಿಲೀಪ್ ಕುಮಾರ್ ಹೀಗೆ ಅಷ್ಟೂ ಹೆಸರಾಂತ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಸಾಂಪ್ರದಾಯಿಕ ಉರ್ದು ಕುಟುಂಬದಲ್ಲಿ ಜನಸಿದ ವಹೀದಾ ಹತ್ತು ವರ್ಷದವಳಿದ್ದಾಗಲೇ ತಂದೆ ತಾಯಿಯನ್ನು ಕಳೆದುಕೊಂಡು, ಕಷ್ಟದಲ್ಲಿ ಬೆಳೆಯುತ್ತಾರೆ. ಆ ನಂತರ ಚಿತ್ರರಂಗವೇ ಅವರನ್ನು ಅಪ್ಪಿ ಎಲ್ಲವನ್ನೂ ಕೊಡುತ್ತದೆ.

LEAVE A REPLY

Please enter your comment!
Please enter your name here