ಅನ್ನ ಕೊಟ್ಟ ದೇವ್ರು ನೀನು ಚೆನ್ನಾಗಿರಪ್ಪ- ಸಿಎಂ ಕಂಡು ಕೈ ಮುಗಿದ ಮಹಿಳೆ

0
99

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಸಿಎಂ ಕಂಡು ಕೈ ಮುಗಿದ ಪ್ರಸಂಗವೊಂದು ನಡೆದಿದೆ.

ಸಿದ್ದರಾಮಯ್ಯ ಅವರು ಇಂದು ಮೈಸೂರಿನ ಉತ್ತನಹಳ್ಳಿ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವರ ದರ್ಶನ ಪಡೆದು ತಮ್ಮ ಕಾರಿನತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಗ್ರಾಮದ ಮಹಿಳೆಯೊಬ್ಬರು ಸಿಎಂ ನೋಡಿ ಕೈ ಮುಗಿದಿದ್ದಾರೆ. ಬಳಿಕ ಅನ್ನ ಕೊಟ್ಟ ದೇವರು ನೀನು ಚೆನ್ನಾಗಿರಪ್ಪ ಎಂದು ಆಶೀರ್ವಾದ ಮಾಡಿದ್ದಾರೆ.

ಅಲ್ಲದೆ ನಿನ್ನನ್ನು ನೋಡಿ ಸಂತೋಷ ಆಯ್ತು ಎಂದು ಹೇಳಿದ್ದಾರೆ. ಮಹಿಳೆಯ ಮಾತು ಕೇಳಿ ಮುಗುಳು ನಗೆ ಬೀರಿದ ಸಿಎಂ ಕಾರು ಹತ್ತಿ ತೆರಳಿದರು.

LEAVE A REPLY

Please enter your comment!
Please enter your name here