ಅಂಬಾರಿಯಷ್ಟು ಭಾರದ ಮರಳು ಚೀಲಗಳನ್ನು ಹೊತ್ತು ತಾಲೀಮು ಆರಂಭಿಸಿದ ಅಭಿಮನ್ಯು ಮತ್ತು ಟೀಮ್

0
95

ಮೈಸೂರು: ನಾಡಹಬ್ಬ ದಸರಾಗೆ ಒಂದು ತಿಂಗಳಿಗಿಂತ ಕಡಿಮೆ ಅವಧಿ ಬಾಕಿಯಿದೆ. ಮೈಸೂರಲ್ಲ್ಲಿ ನಡೆಯವ ದಸರಾ ಸಂಭ್ರಮ ಕೇವಲ ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಪ್ರಸಿದ್ಧ. ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಅವತ್ತು ಅಂಬಾರಿ ಹೊರಲಿರುವ ಅಭಿಮನ್ಯು ಸಾರಥ್ಯದ ಗಜಪಡೆಗೆ ಎರಡು ವಾರಗಳಿಂದ ತಾಲೀಮು ಶುರುವಾಗಿದೆ.

ಜಂಬೂ ಸವಾರಿ ನಡೆಯುವ ಅರಮನೆಯಿಂದ ಬನ್ನಿಮಂಟಪದವರೆಗಿನ ರಸ್ತೆಯಲ್ಲಿ ಇಂದು ಬೆಳಗ್ಗೆ ಆನೆಗಳಿಗೆ ಅಭ್ಯಾಸ ಮಾಡಿಸಲಾಯಿತು. ಟೀಮ್ ಲೀಡರ್ ಅಭಿಮನ್ಯು ತನ್ನ ಹೆಗಲ ಮೇಲೆ ಅಂಬಾರಿಯಷ್ಟು ಭಾರದ ಮರಳು ಚೀಲಗಳನ್ನು ಹೊತ್ತು ಮುಂದೆ ನಡೆಯುತ್ತಿದ್ದರೆ ತಂಡದ ಉಳಿದ ಸದಸ್ಯರು ಅವನ ಹಿಂದೆ ಶಿಸ್ತಿನ ಸಿಪಾಯಿಗಳಂತೆ ಫಾಲೋ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here