ಏಷ್ಯನ್‌ ಗೇಮ್ಸ್‌ನಲ್ಲಿ ಮೊದಲ ಚಿನ್ನದ ಪದಕ ಗೆದ್ದ ಭಾರತ

0
92

ಹಾಂಗ್‌ಝೋ: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. 10 ಮೀ. ರೈಫಲ್ ಸ್ಪರ್ಧೆಯಲ್ಲಿ ಭಾರತದ ಪುರುಷರ ತಂಡವು ಚಿನ್ನದ ಪದಕ ಗೆಲ್ಲುವುದರೊಂದಿಗೆ ವಿಶ್ವದಾಖಲೆ ನಿರ್ಮಿಸಿದೆ.

ವಿಶ್ವ ಚಾಂಪಿಯನ್ ರುದ್ರಂಕ್ಷ್ ಪಾಟೀಲ್, ಒಲಿಂಪಿಯನ್ ದಿವ್ಯಾಂಶ್ ಪನ್ವಾರ್ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ತಂಡ 1893.7 ಅಂಕ ಗಳಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಈ ಹಿಂದೆ ಚೀನಾ 1893.3 ಅಂಕ ಸಂಪಾದಿಸಿ ದಾಖಲೆ ಬರೆದಿತ್ತು.

ಸದ್ಯ 1 ಚಿನ್ನ, 3 ಬೆಳ್ಳಿ, 5 ಕಂಚಿನ ಪದಕ ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. 27 ಚಿನ್ನ, 11 ಬೆಳ್ಳಿ, 5 ಕಂಚು ಸೇರಿ ಒಟ್ಟು 43 ಪದಕ ಗೆದ್ದಿರುವ ಚೀನಾ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

LEAVE A REPLY

Please enter your comment!
Please enter your name here