ಮಂಗಳೂರು: ಕೇಂದ್ರ ಸರ್ಕಾರವು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುವ ಆರ್ಥಿಕ ನೆರವನ್ನು ಜಿಲ್ಲೆಯ 22ಸಾವಿರಕ್ಕೂ ಹೆಚ್ಚು ಜನರು ಇನ್ನೂ ಪಡೆದುಕೊಂಡಿಲ್ಲ. ಈ ರೈತರು ಈವರೆಗೂ ಇ-ಕೆವೈಸಿ ಮಾಡಿಕೊಳ್ಳಲು ಮುಂದೆ ಬರದಿರುವುದು ಇದಕ್ಕೆ ಕಾರಣ.
2018ರಲ್ಲಿ ಈ ಯೋಜನೆ ಆರಂಭವಾಗಿದ್ದು, ಮೊದಲ ಕಂತಿನ ಧನಸಹಾಯ 2019ರ ಜುಲೈನಲ್ಲಿ ರೈತರ ಖಾತೆಗೆ ಜಮಾ ಆಗಿದೆ. ಮೊದಲ ಕಂತಿನ ಹಣವನ್ನು ಜಿಲ್ಲೆಯಲ್ಲಿ ಕೇವಲ 4,220 ಜನರು ಪಡೆದುಕೊಂಡಿದ್ದು, ಇದರ ಮೊತ್ತ ₹84 ಲಕ್ಷದಷ್ಟಾಗಿತ್ತು. ನಂತರದ ದಿನಗಳಲ್ಲಿ ಹಂತ ಹಂತವಾಗಿ ರೈತರಲ್ಲಿ ಜಾಗೃತಿ ಮೂಡಿದ ಪರಿಣಾಮ, ಸೌಲಭ್ಯ ಪಡೆದ ರೈತರ ಸಂಖ್ಯೆ ಹೆಚ್ಚುತ್ತಲೇ ಹೋಗಿದ್ದು, ಈಗ ಲಕ್ಷ ದಾಟಿದೆ. ಕಳೆದ ಆಗಸ್ಟ್‌ನಲ್ಲಿ 14ನೇ ಕಂತಿನ ಹಣ ರೈತರ ಖಾತೆಗೆ ಜಮಾ ಆಗಿದ್ದು, ಜಿಲ್ಲೆಯಲ್ಲಿ 1.28 ಲಕ್ಷ ರೈತರು ಈ ಸೌಲಭ್ಯ ಪಡೆದುಕೊಂಡಿದ್ದಾರೆ. ಅಂದಾಜು ₹25.78 ಕೋಟಿ ಹಣ ರೈತರ ಖಾತೆಗೆ ತಲುಪಿದೆ. ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯ ಸಮಸ್ಯೆಯಿಂದ ಕೆಲವು ರೈತರ ಖಾತೆಗೆ ಜಮಾ ಆಗುವುದು ವಿಳಂಬವಾಗಿದೆ.
ಇ-ಕೆವೈಸಿ ಕಡ್ಡಾಯ:
ಗ್ರಾಹಕರ ವೈಯಕ್ತಿಕ ದಾಖಲೆಗಳ ಸುರಕ್ಷತೆಯ ದೃಷ್ಟಿಯಿಂದ ಕಿಸಾನ್ ಸಮ್ಮಾನ್ ಯೋಜನೆ ಸೌಲಭ್ಯ ಪಡೆಯುವ ರೈತರಿಗೆ ಇ-ಕೆವೈಸಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಡಿಜಿಟಲ್ ಮಾಧ್ಯಮದ ಮೂಲಕ ನಡೆಸುವ ಈ ಪ್ರಕ್ರಿಯೆಗೆ ಭೌತಿಕ ದಾಖಲಾತಿ ಅಗತ್ಯ ಇರುವುದಿಲ್ಲ. ಇ-ಕೆವೈಸಿ ಪೂರ್ಣಗೊಳಿಸಿದ ರೈತರಿಗೆ ಮಾತ್ರ ಕಿಸಾನ್ ಸಮ್ಮಾನ್ ಯೋಜನೆ ಧನಸಹಾಯ ದೊರೆಯುತ್ತಿದೆ. ಜಿಲ್ಲೆಯಲ್ಲಿ ಈ ಯೋಜನೆಗೆ ಅರ್ಹರಾಗಿರುವ ಒಟ್ಟು 1,52,128 ರೈತರಲ್ಲಿ 1,29,700 ರೈತರು ಮಾತ್ರ ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ. ಇನ್ನೂ 22,428 ರೈತರು ಈ ಪ್ರಕ್ರಿಯೆ ಪೂರ್ಣಗೊಳಿಸಿಲ್ಲಎನ್ನುತ್ತಾರೆ ಅಧಿಕಾರಿಗಳು.
ರೈತರು ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಗ್ರಾಮ ಸಭೆಗಳು, ರೈತರ ಸಂಪರ್ಕ ಕೇಂದ್ರಗಳ ಮೂಲಕ ರೈತರಲ್ಲಿ ಅರಿವು ಮೂಡಿಸಲಾಗಿದೆ. ಆದರೂ, ಜಿಲ್ಲೆಯಲ್ಲಿ ಈವರೆಗೆ ಶೇ 85ರಷ್ಟು ರೈತರು ಮಾತ್ರ ಈ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ ಜಮೀನು ಹೊಂದಿರುವ ರೈತರು ಮೃತಪಟ್ಟಿರುವ ಕಾರಣಕ್ಕೆ ಇ-ಕೆವೈಸಿ ಆಗದಿರುವುದು ಗಮನಕ್ಕೆ ಬಂದಿದೆ. ಕೃಷಿ ಜಮೀನು ಹೊಂದಿರುವ ಕೆಲವರು ಹೊರ ರಾಜ್ಯಗಳಲ್ಲಿ ಕೂಲಿ ಅಥವಾ ಇನ್ನಿತರ ಕೆಲಸಕ್ಕೆ ಹೋಗಿದ್ದು, ಅಂತಹವರು ಸಹ ಇ-ಕೆವೈಸಿ ಮಾಡಿಸಿಲ್ಲ ಎಂಬುದನ್ನು ನಮ್ಮ ಸಿಬ್ಬಂದಿ ಪತ್ತೆ ಮಾಡಿದ್ದಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ತಿಳಿಸಿದರು.
‘ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಲಾಗ್‌ಇನ್ ಆಗಿ, ಮಾಹಿತಿ ಅಲ್‌ಪೋಡ್ ಮಾಡಿದರೆ, ಮೊಬೈಲ್ ಫೋನ್‌ಗೆ ಒಟಿಪಿ ಬರುತ್ತದೆ. ಫಲಾನುಭವಿಯ ದೃಢೀಕರಣಕ್ಕೆ ನಡೆಸುವ ಈ ಪ್ರಕ್ರಿಯೆಯನ್ನು ಎಲ್ಲರೂ ಮಾಡಲೇ ಬೇಕು. ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರಗಳ ಮೂಲಕ ಕೂಡ ಇದನ್ನು ಪೂರ್ಣಗೊಳಿಸಬಹುದು’ ಎಂದು ಅವರು ಸಲಹೆ ನೀಡಿದರು.
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…