ಬೆಂಗಳೂರು: ಬಹು ಕೋಟಿ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ & ಗ್ಯಾಂಗ್‍ನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೆ ಸಿಸಿಬಿ ಕಸ್ಟಡಿಯಲ್ಲಿರೋ ಚೈತ್ರಾಗೆ ಭವಿಷ್ಯದ ಬಗ್ಗೆ ಚಿಂತೆ ಶುರುವಾಗಿದೆ.
ಹಿಂದೂ ಪರ ಭಾಷಣ ಮಾಡಿ ನೇಮ್ ಫೇಮ್ ಗಳಿಸಿದ್ದ ಚೈತ್ರಾಗೀಗ, ಅದನ್ನ ಮರಳಿ ಹೇಗೆ ಸಂಪಾದಿಸಬೇಕು ಅನ್ನೋ ಅಲೋಚನೆ ಶುರು ಆಗಿದೆಯಂತೆ. ವಂಚನೆ ಪ್ರಕರಣದಿಂದ ಚೈತ್ರಾ ಬಗ್ಗೆ ಸಮಾಜದಲ್ಲಿ ಕೆಟ್ಟ ಅಭಿಪ್ರಾಯ ಮೂಡಿದೆ.
ತಮ್ಮ ಭಾಷಣದಿಂದ ಹತ್ತಾರು ಜನರ ವಿಶ್ವಾಸ ಹಾಗೂ ಸಾವಿರಾರು ಚಪ್ಪಾಳೆ ಗಿಟ್ಟಿಸಿಕೊಳ್ತಿದ್ದ ಚೈತ್ರಾಗೆ ಪ್ರಕರಣ ಬೆಳಕಿಗೆ ಬಂದಾಗಿಂದ ಐಷಾರಾಮಿ ಕಾರು, ಹಣ ಹೋಗಿರೋದರ ಬಗ್ಗೆ ಚಿಂತೆ ಇಲ್ವಂತೆ. ಬರೀ ಸ್ಟೇಜ್ ಕಾರ್ಯಕ್ರಮ ಭಾಷಣ ಜನರ ಚಪ್ಪಾಳೆ, ಜೈಕಾರ ಸಿಗುತ್ತೋ ಇಲ್ವೋ ಅನ್ನೋದರ ಬಗ್ಗೆ ಹೆಚ್ಚು ಚಿಂತಿಗಿಡಾಗಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿದೆ.
ಮೊದಲೆಲ್ಲ ದೊಡ್ಡ ದೊಡ್ಡ ನಾಯಕರ ಜೊತೆಗೆ ಚೈತ್ರಾ ಸ್ಟೇಜ್ ಹಂಚಿಕೊಳ್ತಿದ್ರು, ಇನ್ನು ಮುಂದೆ ಅಂತಹ ಅವಕಾಶದಿಂದ ವಂಚಿತಳಾಗುವ ಬಗ್ಗೆ ಕೊರಗು ಹೆಚ್ಚಾಗಿದೆಯಂತೆ.