ನಟ ಅಖಿಲ್‌ಗೆ ರಕ್ತದ ಒತ್ತಡದ ಸಮಸ್ಯೆಯಿತ್ತು. ಮನೆಯಲ್ಲಿ ಬಿದ್ದು ತೀವ್ರ ಗಾಯಗಳಾಗಿ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಕುರ್ಚಿಯ ಮೇಲಿಂದ ಬಿದ್ದು ತಲೆ, ಬೆನ್ನಿನ ಭಾಗಕ್ಕೆ ತೀವ್ರ ಗಾಯಗಳಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ವೇಳೆ ಸಾವನ್ನಪ್ಪಿದ್ದಾರೆ. ಪತಿ ನಿಧನದ ಸಮಯದಲ್ಲಿ ಸುಝೇನ್ ಬರ್ನರ್ಟ್ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನಲ್ಲಿದ್ದರು.
‘3 ಈಡಿಯೆಟ್ಸ್’ ಸಿನಿಮಾದಲ್ಲಿ ಅಖಿಲ್ ಮಿಶ್ರಾ ನಟಿಸಿದ ಪಾತ್ರ ಚಿಕ್ಕದಾಗಿದ್ದರೂ ಪ್ರೇಕ್ಷಕರ ಗಮನ ಸೆಳೆದಿತ್ತು. ಡಾನ್, ಗಾಂಧಿ, ಮೈ ಫಾದರ್, ಉತ್ತರನ್, ಉಡಾನ್ ಮತ್ತು ಶ್ರೀಮಾನ್ ಶ್ರೀಮತಿ ಸೇರಿದಂತೆ ಮುಂತಾದ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ.