ಕಾನೂನು ಸಚಿವ ಅರ್ಜುನ್ ರಾಮ್ ರಿಂದ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಣೆ

By: Ommnews

Date:

Share post:

ಲೋಕಸಭೆಯಲ್ಲಿ ಅಂಗೀಕಾರ ಪಡೆದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಇಂದು ಮಂಡಿಸಿದರು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ನೀಡುವ ಮಹಿಳಾ ಮೀಸಲಾತಿ ಮಸೂದೆ 2023 ಅನ್ನು ಲೋಕಸಭೆ ಬುಧವಾರ ಅಂಗೀಕರಿಸಿತ್ತು. ಬಲವಾದ ಬೆಂಬಲವನ್ನು ಕೂಡ ಪಡೆಯಿತು. 60 ಸದಸ್ಯರನ್ನು ಒಳಗೊಂಡ ಎಂಟು ಗಂಟೆಗಳ ಚರ್ಚೆಯ ನಂತರ, ಮಸೂದೆಯನ್ನು ಅಂಗೀಕರಿಸಿತು, 454 ಸದಸ್ಯರು ಪರವಾಗಿ ಮತ ಚಲಾಯಿಸಿದರು, ಕೇವಲ ಇಬ್ಬರು ಅದರ ವಿರುದ್ಧವಾಗಿ ಮತ ಚಲಾಯಿಸಿದರು.

Advertisement
Advertisement
Advertisement

ನಾರಿ ಶಕ್ತಿ ವಂದನ್ ಅಧಿನಿಯಮ್ ಎಂದು ಕರೆಯಲ್ಪಡುವ ಈ ಮಹತ್ವದ ಶಾಸನವು ಮಂಗಳವಾರ ಹೊಸ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ ಲೋಕಸಭೆಯು ಅಂಗೀಕರಿಸಿದ ಮೊದಲ ಮಸೂದೆಯಾಗಿದೆ.

.ಲೋಕಸಭೆಯಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ನೀಡುವ ಮಹಿಳಾ ಮೀಸಲಾತಿ ಮಸೂದೆ, 2023 ಅನ್ನು ಅಂಗೀಕರಿಸುವಲ್ಲಿ ಬೆಂಬಲ ನೀಡಿದ ಲೋಕಸಭೆಯಲ್ಲಿನ ಎಲ್ಲಾ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದರು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section