ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಿಗೆ ಆಧಾರ್, ಪ್ಯಾನ್ ಲಿಂಕ್ ಮಾಡುವುದಕ್ಕೆ ಸೆಪ್ಟೆಂಬರ್ 30 ಕೊನೆಯ ದಿನ

0
87

ನವದೆಹಲಿ, ಸೆ. 20: ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF), ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSC), ಹಿರಿಯ ನಾಗರಿಕರ ಸೇವಿಂಗ್ಸ್ ಸ್ಕೀಮ್ (NCSS) ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳನ್ನು ಹೊಂದಿರುವವರ ಗಮನಕ್ಕೆ ಈ ಸುದ್ದಿ. ನೀವು ಯಾವುದಾದರೂ ಉಳಿತಾಯ ಯೋಜನೆಗಳನ್ನು ಮಾಡಿಸಿದ್ದರೆ, ಆದಷ್ಟೂ ಬೇಗ ನಿಮ್ಮ ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ ಮಾಡಿ. ಸೆಪ್ಟೆಂಬರ್ 30ರವರೆಗೂ ಗಡುವು ಇದ್ದು ಕೇವಲ 9 ದಿನ ಮಾತ್ರ ಬಾಕಿ ಇದೆ.

ಕೇಂದ್ರ ಹಣಕಾಸು ಸಚಿವಾಲಯ 2023ರ ಮಾರ್ಚ್ 31ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ ಪಿಪಿಎಫ್, ಎನ್​ಎಸ್​ಸಿ ಮತ್ತಿತರ ಸ್ಮಾಲ್ ಸೇವಿಂಗ್ ಸ್ಕೀಮ್​ಗಳಿಗೆ ಆಧಾರ್ ಮತ್ತು ಪ್ಯಾನ್ ಅನ್ನು ಸಲ್ಲಿಸುವುದು ಕಡ್ಡಾಯ. ಹೊಸದಾಗಿ ಸ್ಕೀಮ್ ಪಡೆಯುವವರು ಮಾತ್ರವಲ್ಲ, ಈಗಾಗಲೇ ಆ ಯೋಜನೆಗಳನ್ನು ಮಾಡಿಸಿದ್ದವರೂ ಕೂಡ ಆಧಾರ್ ಮತ್ತು ಪ್ಯಾನ್ ಅನ್ನು ಸಲ್ಲಿಸಬೇಕಾಗುತ್ತದೆ. ಸೆಪ್ಟೆಂಬರ್ 30ರೊಳಗೆ ನೀವು ಸ್ಕೀಮ್ ಪಡೆದಿರುವ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖಾ ಕಚೇರಿಗೆ ಹೋಗಿ ಆಧಾರ್ ನಂಬರ್ ಅನ್ನು ನೀಡಬೇಕಾಗುತ್ತದೆ.

ಆಧಾರ್ ಸಲ್ಲಿಸದಿದ್ದರೆ ಏನಾಗುತ್ತದೆ?

ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಮತ್ತು ಪ್ಯಾನ್ ನಂಬರ್ ಅನ್ನು ನೀಡದೇ ಇದ್ದರೆ ಹೂಡಿಕೆ ಸ್ಥಗಿತಗೊಳ್ಳುತ್ತದೆ. ಅಂದರೆ ಈ ಸ್ಕೀಮ್​ಗಳಲ್ಲಿ ತೊಡಗಿಸಿರುವ ನಿಮ್ಮ ಹಣ ಫ್ರೀಜ್ ಆಗುತ್ತದೆ. ಅದನ್ನು ನೀವು ವಿತ್​ಡ್ರಾ ಮಾಡಲು ಆಗುವುದಿಲ್ಲ. ಬಡ್ಡಿ ಹಣವೂ ಜಮೆ ಆಗುವುದಿಲ್ಲ. ನೀವು ಯೋಜನೆಯಲ್ಲಿ ಹಣ ಠೇವಣಿ ಇಡುವುದಕ್ಕೂ ನಿರ್ಬಂಧ ಇರುತ್ತದೆ.

LEAVE A REPLY

Please enter your comment!
Please enter your name here