ಹೊಸ ಬಾಳಿಗೆ ಕಾಲಿಡಲು ಸಿದ್ಧರಾದ ತೃಷಾ ಕೃಷ್ಣನ್

0
89

ಕನ್ನಡದ ‘ಪವರ್’ ಚಿತ್ರದ ನಟಿ ತೃಷಾ ಕೃಷ್ಣನ್ ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಡಲು ಸಜ್ಜಾಗಿದ್ದಾರೆ. ಮಲಯಾಳಂ ಖ್ಯಾತ ನಿರ್ಮಾಪಕನ ಜೊತೆ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಈ ಸುದ್ದಿ ಕಾಲಿವುಡ್ ಗಲ್ಲಿಯಲ್ಲಿ ಗಾಸಿಪ್‌ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ.

40 ವರ್ಷ ಪೂರೈಸಿರೋ ನಟಿ ಬಗ್ಗೆ ಮದುವೆ ಮ್ಯಾಟರ್ ಮತ್ತೆ ಮುನ್ನೆಲೆಗೆ ಬರುತ್ತಿದೆ. ಮಲಯಾಳಂನ ಖ್ಯಾತ ನಿರ್ಮಾಪಕನ ಜೊತೆ ತೃಷಾ ಎಂಗೇಜ್ ಆಗಿದ್ದು, ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ನಟಿ ಕಾಲಿಡಲಿದ್ದಾರೆ ಎನ್ನಲಾಗ್ತಿದೆ. ಮದುವೆಯಾಗುವ ವರನ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ.

ಇಬ್ಬರ ಮದುವೆಗೆ ಗುರುಹಿರಿಯರ ಸಮ್ಮತಿ ಕೂಡ ಸಿಕ್ಕಿದೆ. ತನ್ನನ್ನು ಇಷ್ಟಪಡುವ ವ್ಯಕ್ತಿಯ ಜೊತೆ ತೃಷಾ ಮದುವೆಯಾಗಲು ನಿರ್ಧರಿಸಿದ್ದಾರಂತೆ. ಈ ಹಿಂದೆ ಉದ್ಯಮಿ ವರುಣ್ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥವಾಗಿತ್ತು. ಹಲವು ವೈಯಕ್ತಿಕ ಕಾರಣ, ಭಿನ್ನಾಭಿಪ್ರಾಯಗಳಿಂದ ವರುಣ್ ಜೊತೆಗಿನ ಸಂಬಂಧ ಮುರಿದು ಬಿತ್ತು. 2015ರಲ್ಲಿ ನಡೆದ ಈ ಕಹಿ ಘಟನೆಯಿಂದ ಹೊರಬಂದು ಈಗ ಸಿನಿಮಾಗಳಲ್ಲಿ ಪವರ್ ಚಿತ್ರದ ನಟಿ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ.

ಪೊನ್ನಿಯನ್ ಸೆಲ್ವನ್’ ಚಿತ್ರದ ಸಕ್ಸಸ್ ನಂತರ ಮತ್ತೆ ಸಾಲು ಸಾಲು ಬಿಗ್ ಪ್ರಾಜೆಕ್ಟ್‌ಗಳಿಗೆ ತ್ರಿಷಾ ನಾಯಕಿಯಾಗಿದ್ದಾರೆ. ಕೆರಿಯರ್ ಸಕ್ಸಸ್ ಜೊತೆಗೆ ವೈಯಕ್ತಿಕ ಜೀವನದಲ್ಲೂ ತನ್ನ ಸಂಗಾತಿಯನ್ನ ನಟಿ ಕಂಡುಕೊಂಡಿದ್ದಾರೆ. ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಮಾಹಿತಿ ಸಿಗಲಿದೆ.

LEAVE A REPLY

Please enter your comment!
Please enter your name here