ಕಾವೇರಿ ಹೋರಾಟಕ್ಕೆ ಬೆಂಬಲ ನೀಡದ ಹಿನ್ನೆಲೆ ಸ್ಯಾಂಡಲ್ ವುಡ್ ನಟ-ನಟಿಯರ ವಿರುದ್ಧ ಮಂಡ್ಯ ರೈತರ ಆಕ್ರೋಶ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾ ಮೂಲಕ ಅನ್ನದಾತರು ರೋಷಾವೇಷ ವ್ಯಕ್ತಪಡಿಸುತ್ತಿದ್ದು, ಕಾವೇರಿ ಬಗ್ಗೆ ಧ್ವನಿ ಎತ್ತದ ಕನ್ನಡ ಚಲನಚಿತ್ರ ನಟರಿಗೆ ಧಿಕ್ಕಾರ ಧಿಕ್ಕಾರ ಎಂದು ಫೇಸ್ಬುಕ್, ವಾಟ್ಸ್ ಆಪ್ ಸೇರಿದಂತೆ ವಿವಿಧ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.
ಸ್ಯಾಂಡಲ್‌ವುಡ್‌ನ ಪ್ರಮುಖ ನಟರ ಫೋಟೋ ಹಾಕಿ, ನಟರ ಬಾಯಿಗೆ ಪಟ್ಟಿ ಅಂಟಿಸಿ ಕಿಡಿಕಾರುತ್ತಿದ್ದು, ಕನ್ನಡ ನಾಡಿನ ರೈತರಿಗೆ ಅನ್ಯಾಯ ಆದಾಗ ಮುನ್ನುಗ್ಗಿ ಬರುವ ಶಕ್ತಿ ಅವರಿಗಿದೆ.
ಇಂದು ಯಾವ ನಟರೂ ಕಾವೇರಿ ಬಗ್ಗೆ ಧ್ವನಿ ಎತ್ತದೇ ಇರೋದು ಬಹಳ ನೋವಿನ ಸಂಗತಿ. ನಮ್ಮಿಂದ ನಟರೇ ಹೊರತು, ನಟರಿಂದ ನಾವಲ್ಲ ಅನ್ನೋ ಸತ್ಯ ಅರಿಯಬೇಕು. ಇಂತಹ ನಟರನ್ನು ನಂಬದೆ ಎಲ್ಲಾ ಕನ್ನಡಿಗರು ರೈತರ ಪರ ನಿಲ್ಲಬೇಕು. ರೈತ ಉಳಿದರೆ ನಾವೆಲ್ಲ, ರೈತನಿಲ್ಲದೆ ಜಗವಿಲ್ಲ ಎನ್ನುತ್ತಿದ್ದಾರೆ.