ಬಿಡುಗಡೆಗೆ ಸಿದ್ಧವಾದ ಶವೋಮಿ ಕಂಪನಿಯ ಅತ್ಯಂತ ದುಬಾರಿ ಸ್ಮಾರ್ಟ್​ಫೋನ್

By: Ommnews

Date:

Share post:

ಈ ವರ್ಷದ ಫೆಬ್ರವರಿಯಲ್ಲಿ ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ಶವೋಮಿ 13 ಪ್ರೊ ಸ್ಮಾರ್ಟ್​ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿತು. ಇಲ್ಲಿಯವರೆಗೆ ಭಾರತದಲ್ಲಿ ಶವೋಮಿ ಪರಿಚಯಿಸಿದ ಅತ್ಯಂತ ದುಬಾರಿ ಫೋನ್ ಇದಾಗಿದೆ. ಪ್ರಮುಖ ಫೋನ್ ವಿಮರ್ಶಕರು ಮತ್ತು ಬಳಕೆದಾರರಿಂದ ಈ ಫೋನಿಗೆ ಉತ್ತಮ ವಿಮರ್ಶೆಗಳು ಕೇಳಿ ಬಂದಿದ್ದವು. ಈಗ, ಶವೋಮಿ ಸಂಸ್ಥೆ ತನ್ನ ಮುಂದಿನ ವರ್ಷನ್ ಶವೋಮಿ 14 ಸರಣಿಯ (Xiaomi 14 Series) ಜಾಗತಿಕ ಬಿಡುಗಡೆಗೆ ಸಜ್ಜಾಗಿದೆ. ಈ ಫೋನಿಗಳ ಬೆಲೆ ಕೂಡ ಅತ್ಯಂತ ದುಬಾರಿ ಆಗಿರಲಿದೆ.

Advertisement
Advertisement
Advertisement

ಶವೋಮಿ 14 ಸರಣಿ ಅಡಿಯಲ್ಲಿ ಶವೋಮಿ 14 ಮತ್ತು ಶವೋಮಿ 14 ಪ್ರೊ ಎಂಬ ಎರಡು ಮಾದರಿಗಳನ್ನು ಒಳಗೊಂಡಿರುತ್ತದೆ. ನಿಖರವಾದ ಬಿಡುಗಡೆ ದಿನಾಂಕ ಇನ್ನೂ ತಿಳಿದಿಲ್ಲವಾದರೂ, ನವೆಂಬರ್ 11 ರ ಮೊದಲು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಚೀನಾದಲ್ಲಿ ಒಂದು ಪ್ರಮುಖ ದಿನಾಂಕವಾಗಿದ್ದು, ಡಬಲ್ ಇಲೆವೆನ್ ಮಾರಾಟದ ಈವೆಂಟ್ ನಡೆಯುವ ಸಮಯವಾಗಿದೆ. ನವೆಂಬರ್ 11 ಅನ್ನು ಚೀನಾದಲ್ಲಿ ಸಿಂಗಲ್ಸ್ ಡೇ ಎಂದೂ ಕರೆಯಲಾಗುತ್ತದೆ. ಆ ಸಂದರ್ಭ ಜನಪ್ರಿಯ ಶಾಪಿಂಗ್ ಸೀಸನ್ ಆಗಿದೆ. ಹೀಗಾಗಿ ನ. 11 ರಂದು ಅನಾವರಣಗೊಳ್ಳಲಿದೆಯಂತೆ.

ಶವೋಮಿ 14 6.4-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ ಎಂದು ವರದಿಯಾಗಿದೆ. ಅಂತೆಯೆ ಶವೋಮಿ 14 Pro ದೊಡ್ಡದಾದ, 6.7-ಇಂಚಿನ ಡಿಸ್ ಪ್ಲೇ ಹೊಂದಿರುತ್ತದೆ. ಎರಡೂ ಫೋನ್‌ಗಳು 522 ppi ಜೊತೆಗೆ 1440 x 3200 ಪಿಕ್ಸೆಲ್‌ಗಳ ರೆಸಲ್ಯೂಶನ್​ನಿಂದ ಕೂಡಿದೆ. ಈ ಫೋನ್‌ಗಳು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಮತ್ತು ಪಂಚ್-ಹೋಲ್ ನಾಚ್ ವಿನ್ಯಾಸದೊಂದಿಗೆ ಬರುತ್ತವೆ. ಶವೋಮಿ ಆಂಡ್ರಾಯ್ಡ್ 14 ಅನ್ನು ಆಧರಿಸಿದ MIUI 15 ಅನ್ನು ಪರೀಕ್ಷಿಸುತ್ತಿದೆ. ಇದರ ಜೊತೆಗೆ, ಎರಡೂ ಫೋನ್‌ಗಳು ಇನ್ನೂ ಲಾಂಚ್ ಆಗದ ಕ್ವಾಲ್ಕಂನ ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ.

ಶವೋಮಿ 14 4860 mAh ಬ್ಯಾಟರಿಯನ್ನು ಹೊಂದಿದೆ ಮತ್ತು 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಬಹುದು. OIS ನೊಂದಿಗೆ ಮೂರು 50-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾಗಳೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಈ ಫೋನ್‌ನ ಬೆಲೆ 54,999 ರೂ. ಇರಬಹುದು ಎನ್ನಲಾಗಿದೆ.

ಶವೋಮಿ 14 Pro ಗೆ ಬಂದರೆ, ಈ ಫೋನ್ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯೊಂದಿಗೆ ಬರಬಹುದು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section