ತಮಿಳು ಸಿನಿಮಾ ‘ತಮಿಳರಸನ್’ ನಿರ್ಮಾಪಕಿಯಿಂದ ವಂಚನೆ ನಡೆದಿದೆ. ವಿಜಯ್ ಆ್ಯಂಟನಿ ನಟನೆಯ ಈ ಸಿನಿಮಾ ಹಂಚಿಕೆ ಹಕ್ಕನ್ನು ನೀಡುವುದಾಗಿ ನಂಬಿಸಿ ಮೋಸ ಮಾಡಲಾಗಿದೆ ಎಂದು ನಿರ್ಮಾಪಕಿ ಕೌಸಲ್ಯ ರಾಣಿ ವಿರುದ್ಧ ಧೀರಜ್ ಎಂಟರ್ ಪ್ರೈಸಸ್ನ ವಿತರಕ ಮೋಹನ್ ದಾಸ್ ಪೈ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಮಿಳರಸನ್’ ಸಿನಿಮಾ ಏಪ್ರಿಲ್ 22ರಂದು ಥಿಯೇಟರ್ನಲ್ಲಿ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಚಿತ್ರದ ತಮಿಳು ಹಾಗೂ ತೆಲುಗು ವರ್ಷನ್ನ ಪ್ರದರ್ಶನದ ಹಕ್ಕನ್ನು ನೀಡುವುದಾಗಿ ಕೌಸಲ್ಯ ರಾಣಿ ಅವರು ಮೋಹನ್ ದಾಸ್ ಪೈಗೆ ಹೇಳಿದ್ದರು. 38 ಲಕ್ಷ ರೂಪಾಯಿಗೆ ತಮಿಳು ಹಾಗು ತೆಲುಗು ವರ್ಷನ್ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅಗ್ರಿಮೆಂಟ್ ಆಗಿತ್ತು. ಅಡ್ವಾನ್ಸ್ ರೂಪದಲ್ಲಿ 16 ಲಕ್ಷ ರೂಪಾಯಿ ಹಣವನ್ನು ಧೀರಜ್ ಪೈ ಅವರು ಕೌಸಲ್ಯ ರಾಣಿಗೆ ನೀಡಿದ್ದರು. ಉಳಿದ ಹಣ ಚಿತ್ರ ಬಿಡುಗಡೆ ಬಳಿಕ ನೀಡುವುದಾಗಿ ಒಪ್ಪಂದ ಆಗಿತ್ತು.
‘ಚಿತ್ರ ಬಿಡುಗಡೆಯನ್ನ ನಾನಾ ಕಾರಣದಿಂದ ಮುಂದೂಡಿದ್ದಾರೆ. ಇತ್ತ ಹಣ ಕೂಡ ನೀಡದೆ ಸತಾಯಿಸಿದ್ದಾರೆ. ಕೌಸಲ್ಯ ರಾಣಿ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಧೀರಜ್ ಪೈ ದೂರು ನೀಡಿದ್ದರು. ನ್ಯಾಯಾಲಯದ ಆದೇಶ ಹಿನ್ನಲೆ ಕೇಸ್ ದಾಖಲು ಮಾಡಲಾಗಿದೆ.
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…