ದೇಶ

‘ನಿಮ್ಮ ಸೇವಾ ಭಾವ ವ್ಯಕ್ತಪಡಿಸಿ’: ಪ್ರಧಾನಿ ಮೋದಿ ಜನ್ಮದಿನದಂದು ವಿಶೇಷ ಅಭಿಯಾನ

ದೆಹಲಿ, ಸೆಪ್ಟೆಂಬರ್​ 16: ಸೆ. 17 ರಂದು ಪ್ರಧಾನಿ ನರೇಂದ್ರ ಮೋದಿಯವರ 73ನೇ ಜನ್ಮದಿನವನ್ನು ಆಚರಿಸಲು ಸಚಿವಾಲಯವು ವಿಶೇಷ ಕಾರ್ಯಗಳನ್ನು ಆಯೋಜಿಸಿದೆ. ಜೊತೆಗೆ ಭಾರತೀಯ ಜನತಾ ಪಕ್ಷವು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಪ್ರಧಾನಿ ಮೋದಿ ತಮ್ಮ ಜನ್ಮದಿನವನ್ನು ಸೇವಾ ಮತ್ತು ಜನ ಕಲ್ಯಾಣಕ್ಕೆ ಮೀಸಲಿಟ್ಟಿದ್ದಾರೆ. ಹಾಗಾಗಿ ದೇಶಕ್ಕೆ ಸೇವೆ ಸಲ್ಲಿಸಲು ಭಾರತೀಯ ನಾಗರಿಕರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ‘ನಿಮ್ಮ ಸೇವಾ ಭಾವ ವ್ಯಕ್ತಪಡಿಸಿ’ ಎಂಬ ವಿಶೇಷ ಅಭಿಯಾನವನ್ನು ಬಿಜೆಪಿ ಪ್ರಾರಂಭಿಸಿದೆ.

Advertisement
Advertisement
Advertisement

ಪ್ರಧಾನಿ ಮೋದಿಯವರ ಜನ್ಮದಿನದ ಸಂದರ್ಭದಲ್ಲಿ, ‘ಸೇವೆಯ ಉಡುಗೊರೆ’ ಆಗಿ ತಮ್ಮ ಸೇವಾ ಭಾವವನ್ನು ವ್ಯಕ್ತಪಡಿಸಬಹುದಾಗಿ. ಅದು ನಮೋ ಆ್ಯಪ್ ಬಳಕೆದಾರರಾಗಿರಬಹುದು, ಕಾರ್ಯಕರ್ತರಾಗಿರಬಹುದು ಅಥವಾ ಇತರೆ ಯಾರುಬೇಕಾದರು ಆಗಿರಬಹುದು.

ಈ ಉಡುಗೊರೆ ಭಾರತೀಯರಲ್ಲಿ ಹೆಮ್ಮೆ ಮತ್ತು ಸಾಧನೆಯ ಭಾವವನ್ನು ಹುಟ್ಟುಹಾಕುವುದಲ್ಲದೆ, ರಾಷ್ಟ್ರದ ಸೇವೆಗಾಗಿ ತನ್ನ ಸರ್ವಸ್ವವನ್ನು ಮುಡಿಪಾಗಿಟ್ಟ ನಾಯಕರನ್ನು ಸ್ಮರಿಸಲು ಇದಕ್ಕಿಂತ ಉತ್ತಮವಾದ ದಿನವಿಲ್ಲ.

ನಮೋ ಆಪ್‌ನ ಸಂವಾದಾತ್ಮಕ ಮತ್ತು ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ಬಳಸಿಕೊಂಡು ಪ್ರತಿಜ್ಞೆ ಮತ್ತು ಸೇವೆಯನ್ನು ದಾಖಲು ಮಾಡಲಾಗುತ್ತದೆ. ಇದು ಪ್ರಗತಿ ಮತ್ತು ಅಭಿವೃದ್ಧಿಗಾಗಿ ಹೊಸ ಭಾರತದ ಸಂಕಲ್ಪವನ್ನು ಬಲಪಡಿಸುವಲ್ಲಿ ಬಹಳ ದೂರ ಕೊಂಡ್ಯೊಯಲಿದೆ.

ನಿಮ್ಮ ಸೇವಾ ಭಾವ ಅಭಿಯಾನದ ಮೂಲಕ ಸೇವಾ ಚಟುವಟಿಕೆಗಳ ಫೋಟೋಗಳನ್ನು ಅಪ್ ಲೋಡ್ ಮಾಡಬಹುದು. 9 ವಿಭಿನ್ನ ಸೇವಾ ಚಟುವಟಿಕೆಗಳಿವೆ. ಸೇವಾ ಚಟುವಟಿಕೆಗಳನ್ನು ಪೂರ್ಣಗೊಳಿಸಿದ ನಂತರ ಪಡೆದ ಬ್ಯಾಡ್ಜ್ ಗಳನ್ನು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದರೊಂದಿಗೆ ಇತರರನ್ನು ಪ್ರೇರೆಪಿಸಬಹುದಾಗಿದೆ.

9 ವಿಭಿನ್ನ ಸೇವಾ ಚಟುವಟಿಕೆ ಹೀಗಿವೆ

• ರಕ್ತದಾನ

• ಆತ್ಮನಿರ್ಭ

• ಮಳೆ ನೀರು ಸಂಗ್ರಹ

• ಲೀಡಿಂಗ್ ಡಿಜಿಟಲ್ ಇಂಡಿಯಾ

• ಏಕ್ ಭಾರತ್ ಶ್ರೇಷ್ಠ ಭಾರತ್

• ಲೈಫ್: ಪ್ರೊ-ಪ್ಲಾನೆಟ್ ಪೀಪಲ್

• ಸ್ವಚ್ಛ ಭಾರತ

• ಟಿಬಿ ಮುಕ್ತ ಭಾರತ

• ಒಕಲ್​ ಫಾರ್​​ ಲೋಕಲ್

ನಮೋ ಆ್ಯಪ್ ಎಂದು ಜನಪ್ರಸಿದ್ಧಿ ಪಡೆದಿರುವ ನರೇಂದ್ರ ಮೋದಿ ಅಪ್ಲಿಕೇಶನ್, ಮಾಹಿತಿ ಮತ್ತು ಸಾಧನೆಗಳ ಸಮಗ್ರ ಭಂಡಾರವಾಗಿದೆ. ಬೆರಳ ತುದಿಯಲ್ಲೇ ಎಲ್ಲವೂ ಸಾಧ್ಯವಿರುವ ಈ ಡಿಜಿಟಲ್ ಯುಗದಲ್ಲಿ, ನಮೋ ಅಪ್ಲಿಕೇಶನ್, ನಿಮ್ಮ ಸ್ಮಾರ್ಟ್ ಸಾಧನದ ಮೂಲಕ ನೇರವಾಗಿ ನಿಮಗೆ ತಲುಪಿಸುತ್ತಿದೆ.

ನಮೋ ಆ್ಯಪ್​​, ರಾಷ್ಟ್ರೀಯ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಸಂಬಂಧಿಸಿದಂತೆ ಜನರನ್ನು ಸಂಪರ್ಕಿಸುವ ಪ್ರಮುಖ ವೇದಿಕೆಗಳಲ್ಲಿ ಒಂದಾಗಿದೆ. ಆ ಮೂಲಕ ಜನರು ತಂತ್ರಜ್ಞಾನ ಮತ್ತು ಅಭಿವೃದ್ಧಿಯ ಭಾಗವಾಗಿದ್ದಾರೆ.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago