ದೆಹಲಿ, ಸೆಪ್ಟೆಂಬರ್ 15: ಮಹದೇವ್ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ₹417 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ದುಬೈನಿಂದ ಕಾರ್ಯಾಚರಣೆ ನಡೆಸುತ್ತಿದ್ದ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಅವರು ಪ್ರಚಾರ ಮಾಡುತ್ತಿರುವ ಕಂಪನಿಯು ಆನ್‌ಲೈನ್ ಬುಕ್ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ಹೊಸ ಬಳಕೆದಾರರನ್ನು ದಾಖಲಿಸಲು, ಬಳಕೆದಾರರ ಐಡಿಗಳನ್ನು ರಚಿಸಲು ಮತ್ತು ಬೇನಾಮಿ ಬ್ಯಾಂಕ್ ಖಾತೆಗಳ ಲೇಯರ್ಡ್ ವೆಬ್ ಮೂಲಕ ಹಣ ವ್ಯವಹಾರ ಮಾಡಲು ಬಳಸುತ್ತಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಇಡಿ ಇತ್ತೀಚೆಗೆ ಕೋಲ್ಕತ್ತಾ, ಭೋಪಾಲ್, ಮುಂಬೈ ಮುಂತಾದ ನಗರಗಳಲ್ಲಿ ಮಹಾದೇವ್ ಆ್ಯಪ್ನೊಂದಿಗೆ ಸಂಪರ್ಕ ಹೊಂದಿದ ಮನಿ ಲಾಂಡರಿಂಗ್ ನೆಟ್‌ವರ್ಕ್‌ಗಳ ವಿರುದ್ಧ ವ್ಯಾಪಕ ಶೋಧ ನಡೆಸಿ ದೊಡ್ಡ ಪ್ರಮಾಣದ ದೋಷಾರೋಪಣೆಯ ಸಾಕ್ಷ್ಯಗಳನ್ನು ಪತ್ತೆ ಹಚ್ಚಿದ್ದು, 417 ಕೋಟಿ ರೂಪಾಯಿ ಮೌಲ್ಯದ ಅಪರಾಧದ ಆದಾಯವನ್ನು ವಶಪಡಿಸಿಕೊಂಡಿದೆ ಎಂದ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಮಹಾದೇವ್ ಆನ್‌ಲೈನ್ ಬುಕ್ ಆ್ಯಪ್ ಯುಎಇಯ ಕೇಂದ್ರ ಕಚೇರಿಯಿಂದ ನಡೆಸಲ್ಪಡುತ್ತಿದೆ ಎಂದು ಇಡಿ ತನಿಖೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.