ಮುಂಬೈ, ಸೆಪ್ಟೆಂಬರ್ 14: ಆಧುನಿಕ ಸಮಾಜದಲ್ಲಿ ಮನೆಯ ಜವಾಬ್ದಾರಿಯ ಭಾರವನ್ನು ಗಂಡ-ಹೆಂಡತಿ ಸಮಾನವಾಗಿ ಹೊರಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ನಿತಿನ್ ಸಾಂಬ್ರೆ ಮತ್ತು ಶರ್ಮಿಳಾ ದೇಶಮುಖ್ ಅವರ ವಿಭಾಗೀಯ ಪೀಠವು ಸೆಪ್ಟೆಂಬರ್ 6 ರಂದು ತನ್ನ 13 ವರ್ಷದ ವಿವಾಹವನ್ನು ರದ್ದು ಮಾಡುವಂತೆ ಕೋರಿ 35 ವರ್ಷದ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು. ತಮ್ಮ ವಿಚ್ಛೇದಿತ ಪತ್ನಿ ‘ಕ್ರೌರ್ಯ’ ಮಾಡುತ್ತಿದ್ದಾಳೆ ಎಂದು ಅವರು ದೂರಿದ್ದರೂ ಅದನ್ನು ಸಾಬೀತು ಪಡಿಸಲು ಅವರಿಂದ ಸಾಧ್ಯವಾಗಲಿಲ್ಲ, ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ವಿಚ್ಛೇದನ ಕೋರಿ ತನ್ನ ಮನವಿಯನ್ನು ವಜಾಗೊಳಿಸಿದ ಕುಟುಂಬ ನ್ಯಾಯಾಲಯದ ಮಾರ್ಚ್ 2018 ರ ಆದೇಶವನ್ನು ಆ ವ್ಯಕ್ತಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ದಂಪತಿ 2010 ರಲ್ಲಿ ವಿವಾಹವಾಗಿದ್ದರು. ತನ್ನ ಹೆಂಡತಿ ಯಾವಾಗಲೂ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಇರುತ್ತಾಳೆ, ಮನೆಕೆಲಸವನ್ನು ಮಾಡುವುದಿಲ್ಲ ಎಂದು ಗಂಡ ಮನವಿಯಲ್ಲಿ ವಾದಿಸಿದ್ದಾರೆ.
ಕಚೇರಿಯಿಂದ ಬಂದ ನಂತರ ಮನೆಯ ಎಲ್ಲಾ ಕೆಲಸಗಳನ್ನು ಮಾಡಲು ಒತ್ತಾಯಿಸಲಾಯಿತು. ತನ್ನ ಕುಟುಂಬದಲ್ಲಿ ಈ ವಿಷಯ ಹೇಳಿದ್ದಕ್ಕೆ ಆತ ಬೈದಿದ್ದ. ವಿಚ್ಛೇದಿತ ಪತಿ ತನಗೆ ಹಲವು ಬಾರಿ ದೈಹಿಕ ಕಿರುಕುಳ ನೀಡಿದ್ದಾನೆ ಎಂದೂ ಆಕೆ ಹೇಳಿಕೊಂಡಿದ್ದಾರೆ.
ಪೀಠವು ತನ್ನ ಆದೇಶದಲ್ಲಿ, ಪುರುಷ ಮತ್ತು ಮಹಿಳೆ ಇಬ್ಬರೂ ಉದ್ಯೋಗದಲ್ಲಿದ್ದಾರೆ. ಮನೆಯ ಎಲ್ಲಾ ಕೆಲಸಗಳನ್ನು ಹೆಂಡತಿ ಮಾಡಬೇಕೆಂದು ನಿರೀಕ್ಷಿಸುವುದು ಹಳೇ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಗಮನಿಸಿತು. ಆಧುನಿಕ ಸಮಾಜದಲ್ಲಿ ಮನೆಯ ಜವಾಬ್ದಾರಿಯ ಭಾರವನ್ನು ಪತಿ ಮತ್ತು ಪತ್ನಿ ಇಬ್ಬರೂ ಸಮಾನವಾಗಿ ಹೊರಬೇಕು. ಮನೆಯ ಮಹಿಳೆ ಮಾತ್ರ ಮನೆಯ ಜವಾಬ್ದಾರಿಯನ್ನು ಹೊರಬೇಕು ಎಂದು ನಿರೀಕ್ಷಿಸುವ ಹಿಂದಿನ ಕಾಲದ ಮನಸ್ಥಿತಿಯು ಸಕಾರಾತ್ಮಕ ಬದಲಾವಣೆಗೆ ಒಳಗಾಗಬೇಕಾಗಿದೆ ಎಂದು ಹೈಕೋರ್ಟ್ ಹೇಳಿದೆ.
ವೈವಾಹಿಕ ಸಂಬಂಧವು ಈ ಪ್ರಕರಣದಲ್ಲಿ ಪತ್ನಿ ತನ್ನ ಪೋಷಕರಿಂದ ಪ್ರತ್ಯೇಕಗೊಳ್ಳಲು ಕಾರಣವಾಗಬಾರದು. ಅದೇ ವೇಳೆ ಆಕೆ ತನ್ನ ಪೋಷಕರೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವಂತೆ ಮಾಡಬಾರದು.
ಒಬ್ಬರ ಪೋಷಕರೊಂದಿಗೆ ಸಂಪರ್ಕದಲ್ಲಿರುವುದನ್ನು ಯಾವುದೇ ಕಲ್ಪನೆಯ ಮೂಲಕ ಇತರರಿಗೆ ಮಾನಸಿಕ ಸಂಕಟವನ್ನು ಉಂಟುಮಾಡುತ್ತದೆ ಎಂದು ಅರ್ಥೈಸಲಾಗುವುದಿಲ್ಲ. ನಮ್ಮ ದೃಷ್ಟಿಯಲ್ಲಿ, ಪ್ರತಿವಾದಿಯ ಮೇಲೆ ತನ್ನ ಪೋಷಕರೊಂದಿಗಿನ ಸಂಪರ್ಕವನ್ನು ನಿಲ್ಲಿಸಲು ನಿರ್ಬಂಧಗಳನ್ನು ಹಾಕುವುದು, ವಾಸ್ತವವಾಗಿ, ದೈಹಿಕ ಕ್ರೌರ್ಯದ ಜತೆಗೆ ಮಾನಸಿಕ ಕ್ರೌರ್ಯವೂ ಆಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…