ಅತ್ಯಂತ ಹೈ ಪ್ರೊಫೈಲ್ ಹನಿಟ್ರಾಪ್ ಕೇಸ್​ನ ಕಿಂಗ್​ಪಿನ್ ಬೆಂಗಳೂರಿನಲ್ಲಿ ಅರೆಸ್ಟ್

By: Ommnews

Date:

Share post:

ಮಧ್ಯಪ್ರದೇಶದ ಅತಿದೊಡ್ಡ ಹನಿಟ್ರ್ಯಾಪ್ ಹಗರಣದ ಕಿಂಗ್​​ಪಿನ್ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾಳೆ. ಮಾಜಿ ಸಚಿವರು, ಉನ್ನತ ಮಟ್ಟದ ಅಧಿಕಾರಿಗಳಿಗೆ ಯುವತಿಯರನ್ನು ಪೂರೈಕೆ ಮಾಡಿ ಬಳಿಕ ಅವರನ್ನು ಹನಿಟ್ರ್ಯಾಪ್​ ಖೆಡ್ಡಾಕ್ಕೆ ಬೀಳಿಸಿ ಲಕ್ಷ ಲಕ್ಷ ಹಣ ದೋಚುತ್ತಿದ್ದ ಆರತಿ ದಯಾಳ್​ ಬೆಂಗಳೂರಿನ ಮಹದೇವಪುರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

Advertisement
Advertisement
Advertisement

ಬೆಂಗಳೂರು, (ಸೆಪ್ಟೆಂಬರ್ 13): ಮಧ್ಯಪ್ರದೇಶದ(madhya pradesh) ಅತ್ಯಂತ ಹೈ ಪ್ರೊಫೈಲ್ ಹನಿಟ್ರಾಪ್ ಕೇಸ್​ನ(high profile honey trap) ಮಾಸ್ಟರ್ ಮೈಡ್ ಬೆಂಗಳೂರಿನಲ್ಲಿ (Bengaluru) ಸಿಕ್ಕಿಬಿದ್ದಿದ್ದಾಳೆ. ಮಧ್ಯಪ್ರದೇಶದ ಅತಿದೊಡ್ಡ ಹನಿಟ್ರ್ಯಾಪ್ ಹಗರಣದ ಮಾಸ್ಟರ್ ಮೈಡ್ ಆರತಿ ದಯಾಳ್(Aarti Dayal)​ ಅವಳನ್ನ ಬೆಂಗಳೂರಿನ ಮಹದೇವಪುರ ಪೊಲೀಸರು ಬಂಧಿಸಿ ಮಧ್ಯಪ್ರದೇಶದ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. 2019 ರಲ್ಲಿ ಮಧ್ಯಪ್ರದೇಶದಲ್ಲಿ ನಡೆದಿದ್ದ ಬಹುದೊಡ್ಡ ಹೈಪ್ರೋಫೈಲ್​ ಹನಿಟ್ರಾಪ್ ಪ್ರಕರಣದಲ್ಲಿ ಆರತಿ ಜೈಲು ಸೇರಿ 2020 ರಲ್ಲಿ ಹೊರ ಬಂದವಳು ಯಾರಿಗೂ ಸಿಕ್ಕಿರಲಿಲ್ಲ. ಸೋನು, ಸಮಂತಾ, ಆರತಿ ಅಗರ್ವಾಲ್ ಹೀಗೆ ಬೇರೆ ಬೇರೆ ಹೆಸರಿನಲ್ಲಿ ತಲೆಮರಿಸಿಕೊಂಡಿದ್ದಳು. ಅಲ್ಲದೇ ಈ ಹಿಂದೆ ಹೈ ಪ್ರೊಫೈಲ್ ಹನಿಟ್ರಾಪ್ ಮಾಡುತ್ತಿದ್ದವಳು ಈಗ ಕಳ್ಳತನ ದಾರಿ ಹಿಡಿದಿದ್ದಳು.

ಇಂತಹದ್ದೇ ಹನಿಟ್ರ್ಯಾಪ್​ ಪ್ರಕರಣವೊಂದರಲ್ಲಿಇಂದೋರ್‌ ಪುರಸಭೆಯ ಎಂಜಿನಿಯರ್‌ ಹರ್ಬಜನ್‌ ಸಿಂಗ್‌ ಅವರಿಗೆ ಆರತಿ ದಯಾಳ್‌ ಮತ್ತು ಮೋನಿಯಾ ಯಾದವ್‌ ಸೇರಿ 3 ಕೋಟಿ ರೂ. ಹಫ್ತಾ ಬೇಡಿಕೆ ಇಟ್ಟಾಗ ಅವರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಈ ಜಾಲದ ಕೃತ್ಯ ಬಯಲಾಗಿತ್ತು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section