ದರ್ಪದಿಂದ ಭಾರತದ ವಿಮಾನ ನಿರಾಕರಿಸಿ 36 ಗಂಟೆ ದೆಹಲಿಯಲ್ಲೇ ಕಳೆದ ಕೆನಡಾ ಪ್ರಧಾನಿ!

By: Ommnews

Date:

Share post:

ನವದೆಹಲಿ: ಜಿ20 ಶೃಂಗಸಭೆಗೆ ಆಗಮಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದರು. ಖಲಿಸ್ತಾನಿ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ತಮ್ಮ ಮತಬ್ಯಾಂಕ್‌ಗಾಗಿ ಖಲಿಸ್ತಾನ ಪರ ಹೇಳಿಕೆ ನೀಡುತ್ತಾ, ಭಾರತವನ್ನು ದೂಷಿಸುವ ಜಸ್ಟಿನ್ ಟ್ರುಡೋ, ಭಾರತದ ಪ್ರಧಾನಿ ಎಚ್ಚರಿಕೆ ಬಳಿಕವೂ ಮೃಧು ಧೋರಣೆ ತಳೆದಿದ್ದರು. ಇತ್ತ ಸಭೆ ಮುಗಿಸಿ ಕೆನಡಾ ತೆರಳಲು ಮುಂದಾದ ಜಸ್ಟಿನ್ ಟ್ರುಡೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಭಾರತ ಏರ್ ಇಂಡಿಯಾ ವಿಮಾನ ಸೇವೆ ಒದಗಿಸಲು ಮುಂದಾಗಿತ್ತು. ಏರ್ ಇಂಡಿಯಾದಲ್ಲಿ ಪ್ರಯಾಣ ಮಾಡುವಂತೆ ಭಾರತ ಸೂಚಿಸಿತ್ತು. ಆದರೆ ದರ್ಪದಿಂದಲೇ ನಿರಾಕರಿಸಿದ ಜಸ್ಟಿನ್ ಟ್ರುಡೋ, ತಾಂತ್ರಿಕ ತಂಡ ಕೆಲವೇ ಸಮಯದಲ್ಲಿ ದುರಸ್ಥಿ ಮಾಡಲಿದ್ದಾರೆ ಎಂದಿದ್ದರು. ಆದರೆ ಕೆಲವೇ ಸಮಯ ಬರೋಬ್ಬರಿ 36 ಗಂಟೆ ತೆಗೆದುಕೊಂಡಿದೆ. ನಿನ್ನೆ ಹೊರಡಬೇಕಿದ್ದ ಟ್ರುಡೋ ಇಂದುಕೆನಡಾಗೆ ತೆರಳಿದ್ದಾರೆ.

Advertisement
Advertisement
Advertisement

ಜಸ್ಟಿನ್ ಟ್ರುಡೋ ವಿಮಾದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ವಿಮಾನ ಸೇವೆ ಒದಗಿಸಲು ಮುಂದಾಗಿತ್ತು. ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಪ್ರಯಾಣಿಸುವ ವಿಮಾನವನ್ನು ಜಸ್ಟಿನ್ ಟ್ರುಡೋ ಪ್ರಯಾಣಕ್ಕೆ ವ್ಯವಸ್ಥೆ ಮಾಡಿತ್ತು. ಆದರೆ ಟ್ರುಡೋ ಭಾರತದ ಸೇವೆಯನ್ನು ತುಚ್ಚವಾಗಿ ನೋಡಿದ್ದು ಮಾತ್ರವಲ್ಲ, ಕೆಲವೇ ಗಂಟೆಗಳಲ್ಲಿ ಕೆನಡಾ ತಾಂತ್ರಿಕ ಸಿಬ್ಬಂದಿಗಳು ವಿಮಾನ ದುರಸ್ತಿ ಮಾಡಲಿದ್ದಾರೆ ಎಂದು ಭಾರತ ವಿಮಾನ ನಿರಾಕರಿಸಿದ್ದರು. ಸತತ 36 ಗಂಟೆಗಳ ಬಳಿಕ ಟ್ರುಡೋ ವಿಮಾನ ದುರಸ್ತಿ ಮಾಡಲಾಗಿದೆ.

ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಕಳೆದ 2 ದಿನಗಳಿಂದ ಭಾರತದಲ್ಲೇ ಉಳಿದುಕೊಂಡಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಮತ್ತು ಕೆನಡಾ ದೇಶದ ನಿಯೋಗ ಮಂಗಳವಾರ ಮಧ್ಯಾಹ್ನ ತವರಿಗೆ ಮರಳಿದೆ. ಜಿ20 ಶೃಂಗದಲ್ಲಿ ಭಾಗವಹಿಸಲು ಟ್ರುಡೋ ಶುಕ್ರವಾರವೇ ನವದೆಹಲಿಗೆ ಆಗಮಿಸಿದ್ದರು. ಪೂರ್ವ ನಿಗದಿತ ಕಾರ್ಯಕ್ರಮಗಳ ಅನ್ವಯ ಅವರು ಭಾನುವಾರ ಸಂಜೆ ತವರಿಗೆ ಮರಳಬೇಕಿತ್ತು.

ಆದರೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರು ಅಂದು ದಿಲ್ಲಿಯಲ್ಲೇ ತಂಗಿದ್ದರು. ಬಳಿಕ ಕೆನಡಾದಿಂದಲೇ ಇನ್ನೊಂದು ವಿಮಾನ ತರಿಸಿಳೊಳ್ಳಲು ಅವರು ನಿರ್ಧರಿಸಿದ್ದರು. ಆದರೆ ಆ ವಿಮಾನವೂ ತಾಂತ್ರಿಕ ದೋಷಕ್ಕೆ ಒಳಗಾಗಿತ್ತು. ಕೊನೆಗೆ ವಿಮಾನ ದುರಸ್ತಿಗಾಗಿ ಹಿರಿಯ ಅಧಿಕಾರಿಗಳ ತಂಡ ನವದೆಹಲಿಗೆ ಆಗಮಿಸಿತ್ತು. ಮಂಗಳವಾರ ಬೆಳಗ್ಗೆ ಹೊತ್ತಿಗೆ ವಿಮಾನ ದುರಸ್ತಿಯಾದ ಹಿನ್ನೆಲೆಯಲ್ಲಿ ಮಧ್ಯಾಹ್ನ 1.10ರ ವೇಳೆ ಜಸ್ಟಿನ್‌ ಟ್ರುಡೋ ಮತ್ತು ನಿಯೋಗ ಹೊತ್ತ ವಿಮಾನ ಕೆನಡಾದತ್ತ ಪ್ರಯಾಣ ಬೆಳೆಸಿತು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section