
ಸವಣೂರು: ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಸಾರ್ಟಿಸಿ ಬಸ್ಸೊಂದು ರಸ್ತೆ ಬದಿಯ ಚರಂಡಿಗೆ ಉರುಳಿದ ಘಟನೆ ಸರ್ವೆಯಲ್ಲಿ ಸಂಭವಿಸಿದೆ.
ಜಲಜೀವನ್ ಯೋಜನೆಯಡಿ ಮಣ್ಣು ಅಗೆದು ಪೈಪ್ ಅಳವಡಿಸಲಾಗಿತ್ತು. ಮಳೆ ಬಂದ ಕಾರಣ ಆ ಮಣ್ಣು ಮೆದುವಾಗಿತ್ತು. ಪುತ್ತೂರಿನಿಂದ ಸವಣೂರು ಮೂಲಕ ಪಂಜ ಕಡೆಗೆ ಹೋಗುತ್ತಿದ್ದ ಬಸ್ ಸರ್ವೆಯಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ದಾರಿ ಬಿಡಲೆಂದು ಬದಿಗೆ ಸರಿದಾಗ ಬಸ್ಸ್ ಚರಂಡಿಗೆ ವಾಲಿ ನಿಂತಿದೆ.