ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಶೋಧ ಪ್ರಬಂಧಕ್ಕೆ ಬ್ಯಾಂಕಾಕ್ ನಲ್ಲಿನ ಸಭೆಯಲ್ಲಿ ‘ಸರ್ವೋತ್ತಮ ಪ್ರಸ್ತುತಿ’ ಪ್ರಶಸ್ತಿ ಪ್ರಧಾನ.

By: Ommnews

Date:

Share post:

ದಿನಾಂಕ : 12-09-2023

Advertisement
Advertisement
Advertisement

ಧಾರ್ಮಿಕ ಚಿಹ್ನೆಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳ ಅಧ್ಯಯನ ಮಾಡಿರಿ !

  • ಶಾರ್ನ್ ಕ್ಲಾರ್ಕ್ , ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಪ್ರತಿಯೊಂದು ಚಿಹ್ನೆಯಿಂದ ಸೂಕ್ಷ್ಮ ಸಕಾರಾತ್ಮಕ ಅಥವಾ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿರುತ್ತವೆ. ಬಹಳಷ್ಟು ಧಾರ್ಮಿಕ ನಾಯಕರು ತಮ್ಮ ಧಾರ್ಮಿಕ ಚಿಹ್ನೆಯಿಂದ ಪ್ರಕ್ಷೇಪಿತವಾಗುವ ಸ್ಪಂದನದ ಕಡೆಗೆ ಗಮನ ನೀಡುವುದಿಲ್ಲ ಮತ್ತು ಅದರಿಂದ ಅವರ ಅನುಯಾಯಿಗಳು ಮತ್ತು ಭಕ್ತರ ಮೇಲೆ ಪ್ರತಿಕೂಲ ಪರಿಣಾಮ ಆಗಬಹುದು. ಅದಕ್ಕಾಗಿ ಧಾರ್ಮಿಕ ಚಿಹ್ನೆಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳ ಅಧ್ಯಯನ ಮಾಡಬೇಕೆಂದು ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ.ಶಾರ್ನ ಕ್ಲಾರ್ಕ್ ಇವರು ಪ್ರತಿಪಾದಿಸಿದರು. ಇತ್ತೀಚಿಗೆ ಬ್ಯಾಂಕಾಕ್ ಥೈಲ್ಯಾಂಡ್ ನಲ್ಲಿ ನಡೆದಿರುವ ಟೆಂತ್ ಇಂಟರ್ ನಾಷನಲ್ ಕಾನ್ಫರೆನ್ಸ್ ಆಫ್ ಸೋಶಿಯಲ್ ಸೈನ್ಸ್ 2023 ಈ ಸಭೆಯಲ್ಲಿ ಶ್ರೀ.ಕ್ಲಾರ್ಕ್ ಮಾತನಾಡುತ್ತಿದ್ದರು. ಅವರು ‘ದೈವಿ ಮತ್ತು ದಾನವಿ , ಹಿಂದೂ ಮತ್ತು ನಾಝಿ ಸ್ವಸ್ತಿಕ ಇದರ ಆಧ್ಯಾತ್ಮಿಕ ಅಂಶಗಳ ತುಲನಾತ್ಮಕ ಅಧ್ಯಯನ’ ಈ ಶೋಧ ಪ್ರಬಂಧ ಪ್ರಸ್ತುತಪಡಿಸಿದರು. ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಇದರ ಲೇಖಕರಾಗಿದ್ದು ಶ್ರೀ. ಕ್ಲಾರ್ಕ್ ಸಹಲೇಖಕರಾಗಿದ್ದಾರೆ.

ಶ್ರೀ. ಕ್ಲಾರ್ಕ್ ಇವರು ಪ್ರಸ್ತುತಪಡಿಸಿರುವ ಶೋಧ ಪ್ರಬಂಧಕ್ಕೆ ಸಭೆಯಲ್ಲಿ ‘ಸರ್ವೋತ್ಕೃಷ್ಟ ಪ್ರಸ್ತುತಿ’ , ಪ್ರಶಸ್ತಿ ನೀಡಿ ಗೌರವಿಸಿದರು. ಅಕ್ಟೋಬರ್ ೨೦೧೬ ರಿಂದ ಆಗಸ್ಟ್ ೨೦೨೩ ಈ ಕಾಲಾವಧಿಯಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ೧೮ ರಾಷ್ಟ್ರೀಯ ಹಾಗೂ ೯೩ ಅಂತರಾಷ್ಟ್ರೀಯ , ಹೀಗೆ ಒಟ್ಟು ೧೧೧ ವೈಜ್ಞಾನಿಕ ಸಭೆಗಳಲ್ಲಿ ಶೋಧ ಪ್ರಬಂಧ ಪ್ರಸ್ತುತಪಡಿಸಲಾಗಿದೆ. ಇದರಲ್ಲಿನ ೧೩ ಅಂತರಾಷ್ಟ್ರೀಯ ಸಭೆಯಲ್ಲಿ ಸರ್ವೋತ್ಕೃಷ್ಟ ಪ್ರಸ್ತುತೀಕರಣ ಪ್ರಶಸ್ತಿ ದೊರೆತಿವೆ.

ಕಾರ್ಯಕ್ರಮದಲ್ಲಿ ಶೋಧ ಪ್ರಬಂಧವನ್ನು ಮಂಡಿಸುತ್ತಿರುವ ಶ್ರೀ. ಶಾನ್ ಕ್ಲರ್ಕ್

ಶ್ರೀ. ಶಾರ್ನ ಕ್ಲಾರ್ಕ್ ಇವರು ಚಿಹ್ನೆಗಳ ಬಗ್ಗೆ ಮತ್ತು ವಿಶೇಷವಾಗಿ ವಿವಿಧ ಧಾರ್ಮಿಕ ಚಿಹ್ನೆಗಳ ಬಗ್ಗೆ ವೈಜ್ಞಾನಿಕ ಉಪಕರಣಗಳಿಂದ ಮತ್ತು ಸೂಕ್ಷ್ಮ ಜ್ಞಾನದ ಮಾಧ್ಯಮದಿಂದ ನಡೆಸಿರುವ ವಿಸ್ತೃತ ಸಂಶೋಧನೆ ಸವಿಸ್ತಾರವಾಗಿ ಪ್ರಸ್ತುತಪಡಿಸಿದರು. ಇದರಲ್ಲಿ ಅವರು ಪ್ರಾಮುಖ್ಯತೆಯಿಂದ ಹಿಂದೂ ಸ್ವಸ್ತಿಕ ಮತ್ತು ಈ ಸ್ವಸ್ತಿಕ ೪೫ ಅಂಶ(ಡಿಗ್ರಿ) ತಿರುಗಿಸಿ ಕಪ್ಪು ಬಣ್ಣದಲ್ಲಿ ಮತ್ತು ಕೆಂಪುಬಣ್ಣದ ಹಿನ್ನೆಲೆಯಲ್ಲಿ ತಯಾರಿಸಿದ ನಾಝಿ ಸ್ವಸ್ತಿಕದಿಂದ ಪ್ರಕ್ಷೇಪಿತವಾಗುವ ಸ್ಪಂದನಗಳನ್ನು ಮತ್ತು ಶಕ್ತಿಯ ಅಧ್ಯಯನ ಮಂಡಿಸಿದರು. ಮೂಲ ಹಿಂದೂ ಸ್ವಸ್ತಿಕ ಚಿಹ್ನೆಯಲ್ಲಿ ಹೆಚ್ಚಿನ ಪ್ರಮಾಣದ ಸಕಾರಾತ್ಮಕ ಸ್ಪಂದನಗಳು ಮತ್ತು ಶಕ್ತಿ ಕಂಡು ಬಂದಿತು. ಹಾಗೂ ನಾಝಿ ಸ್ವಸ್ತಿಕ ಚಿಹ್ನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಮತ್ತು ಶಕ್ತಿ ಕಂಡು ಬಂದಿತ್ತು. ಇಷ್ಟೇ ಅಲ್ಲದೆ ನಾಝಿ ಸ್ವಸ್ತಿಕ ಕೈಗೆ ಕಟ್ಟಿಕೊಂಡ ನಂತರ ಅದರಿಂದ ವ್ಯಕ್ತಿಯಲ್ಲಿನ ನಕಾರಾತ್ಮಕ ಸ್ಪಂದನಗಳು ಹೆಚ್ಚಾಗಿದ್ದವು. ಹಾಗೂ ಅವರಲ್ಲಿನ ಸಕಾರಾತ್ಮಕ ಶಕ್ತಿ ಸಂಪೂರ್ಣವಾಗಿ ನಾಶವಾಗಿತ್ತು . ತದ್ವಿರುದ್ಧ ಹಿಂದೂ ಸ್ವಸ್ತಿಕ ಕೈಗೆ ಕಟ್ಟಿದ ನಂತರ ನಕಾರಾತ್ಮಕ ಶಕ್ತಿ ಇಲ್ಲವಾಗಿ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚಿತು, ಎಂಬುದು ವೈಜ್ಞಾನಿಕ ಉಪಕರಣಗಳ ಮೂಲಕ ನಡೆಸಿರುವ ಸಂಶೋಧನೆಯಿಂದ ನಿಷ್ಪನ್ನವಾಯಿತು.

ಓಂ ಈ ಹಿಂದೂ ಧರ್ಮದಲ್ಲಿನ ಚಿಹ್ನೆಯಿಂದ ಕಂಪ್ಯೂಟರ್ ಫಾಂಟ್ ನಲ್ಲಿ ಉಪಲಬ್ಧವಿರುವ ಎರಡು ಬೇರೆ ಬೇರೆ ಆಕಾರದ ಮತ್ತು ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ ತಯಾರಿಸಿದ ಓಂ ಹೀಗೆ ಮೂರು ಓಂ ಗಳ ಎರಡು ಬೇರೆ ಬೇರೆ ವೈಜ್ಞಾನಿಕ ಉಪಕರಣಗಳಿಂದ ಅಧ್ಯಯನ ನಡೆಸಲಾಯಿತು. ಇದರಲ್ಲಿ ಕಂಪ್ಯೂಟರ್ ಓಂ ನ ಒಂದು ಆಕಾರದಿಂದ ನಕಾರಾತ್ಮಕ ಶಕ್ತಿ ಪ್ರಕ್ಷೇಪಿತವಾಗುವುದು ಕಾಣಿಸಿತು, ಹಾಗೂ ಇನ್ನೊಂದು ಆಕಾರದಿಂದ ಸ್ವಲ್ಪ ಪ್ರಮಾಣದಲ್ಲಿ ಸಕಾರಾತ್ಮಕ ಶಕ್ತಿ ಕಂಡು ಬಂದಿತು ; ಆದರೆ ಮಹರ್ಷಿ ಆದ್ಯಾತ್ಮ ವಿಶ್ವವಿದ್ಯಾಲಯವು ಸಿದ್ಧಗೊಳಿಸಿರುವ ಓಂ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕಾರಾತ್ಮಕ ಶಕ್ತಿ ಕಾಣಿಸಿತು. ಇದರಿಂದ ಧಾರ್ಮಿಕ ಚಿಹ್ನೆಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳ ಅಧ್ಯಯನ ಮಾಡುವುದು ಅವಶ್ಯಕವಾಗಿದೆ, ಎಂದು ಇದರಿಂದ ಸ್ಪಷ್ಟವಾಗುತ್ತದೆ .

ನಿಮ್ಮ ವಿನಮ್ರ

ಶ್ರೀ. ಆಶಿಷ ಸಾವಂತ , ಸಂಶೋಧನಾ ವಿಭಾಗ,
ಮಹರ್ಷಿ ‌ಅಧ್ಯಾತ್ಮ ವಿಶ್ವವಿದ್ಯಾಲಯ
(ಸಂಪರ್ಕ: 9561574972 )

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section