ರಾಜ್ಯ

12 ಕೋಟಿ ರೂ. ಮೌಲ್ಯದ ಕೊಕೇನ್ ಸಾಗಣೆಗೆ ಯತ್ನ; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೀನ್ಯಾದ ಮಹಿಳೆ ಬಂಧನ

ಬೆಂಗಳೂರು : ಸೋಮವಾರ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 1.02 ಕೆಜಿ ಹೈಗ್ರೇಡ್ ಕೊಕೇನ್ ಕಳ್ಳಸಾಗಣೆ ಮಾಡಲು ಕೀನ್ಯಾ ಮೂಲದ ಮಹಿಳೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಬಂಧಿಸಿದೆ.

Advertisement
Advertisement
Advertisement

ಆರೋಪಿಯನ್ನು ಅಜೆಂಗ್ ಓ ಕ್ಯಾರೋಲಿನ್ ಅಗೋಲಾ ಎಂದು ಗುರುತಿಸಲಾಗಿದ್ದು, ಆಕೆ ತನ್ನ ಖಾಸಗಿ ಭಾಗಗಳು ಮತ್ತು ಒಳ ಉಡುಪುಗಳಲ್ಲಿ ಕ್ಯಾಪ್ಸುಲ್‌ಗಳ ರೂಪದಲ್ಲಿದ್ದ ನಿಷಿದ್ಧ ವಸ್ತುವನ್ನು ಬಚ್ಚಿಟ್ಟಿದ್ದಳು. ಆಕೆಯ ವಿರುದ್ಧ  ‘ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ (ಎನ್‌ಡಿಪಿಎಸ್‌) ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಕೆಯು ಅಡಿಸ್ ಅಬಾಬಾದಿಂದ ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನದಲ್ಲಿ (ಇಟಿ 690) ಪ್ರಯಾಣ ಬೆಳೆಸಿದ್ದರು. ಅದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಳಿಗ್ಗೆ 11.09ಕ್ಕೆ ತಲುಪಿತ್ತು.

ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಸಿಐಎಸ್ಎಫ್ ಪೊಲೀಸ್ ಲಕ್ಷ್ಮಿ ಮೀನಾ ಅವರು ಅಗೋಲಾರನ್ನು ಪರೀಕ್ಷಿಸುವಾಗ ಅನುಮಾನಗೊಂಡಿದ್ದಾರೆ. ಬಳಿಕ ‘ಆಕೆಯನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದರು ಮತ್ತು ಆಕೆಯ ಬಟ್ಟೆಯನ್ನು ತೆಗೆಯುವಂತೆ ಹೇಳಿದ್ದಾರೆ. ಈ ವೇಳೆ ಒಳ ಉಡುಪುಗಳಲ್ಲಿ ಅನೇಕ ಕ್ಯಾಪ್ಸುಲ್‌ಗಳು ಕಂಡುಬಂದಿವೆ. ಕ್ಯಾಪ್ಸುಲ್‌ಗಳಲ್ಲಿ ಒಂದನ್ನು ತೆರೆಯಲಾಗಿತ್ತು ಮತ್ತು ಆಕೆ ಉತ್ತಮ ಗುಣಮಟ್ಟದ ಕೊಕೇನ್ ಸಾಗಿಸುತ್ತಿದ್ದಳು ಎಂಬುದು ತಿಳಿಯಿತು’ ಎಂದು ಮೂಲಗಳು ತಿಳಿಸಿವೆ.

ಮೊದಲಿಗೆ ಅಗೋಲಾಳನ್ನು ಆಸ್ಟರ್ ಮೆಡಿಕಲ್ ಸೆಂಟರ್‌ಗೆ ಕರೆದೊಯ್ಯಲಾಗಿದ್ದು, ಸಂಪೂರ್ಣ ತಪಾಸಣೆಯ ನಂತರ, ಆಕೆಯ ಖಾಸಗಿ ಭಾಗಗಳಲ್ಲಿ ಹೆಚ್ಚಿನ ಕ್ಯಾಪ್ಸುಲ್‌ಗಳನ್ನು ಮರೆಮಾಡಿರುವುದನ್ನು ವೈದ್ಯಕೀಯ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ‘ವಿಚಾರಣೆ ವೇಳೆ, ಆಕೆ ಕೆಲವು ಕ್ಯಾಪ್ಸುಲ್‌ಗಳನ್ನು ನುಂಗಿರುವುದಾಗಿ ಒಪ್ಪಿಕೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ, ಆಕೆಯ ಹೊಟ್ಟೆಯ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಲಾಯಿತು’ ಎಂದು ಮತ್ತೊಂದು ಮೂಲವು ತಿಳಿಸಿದೆ. ಪತ್ತೆಯಾದ ಕ್ಯಾಪ್ಸುಲ್‌ಗಳ ಸಂಖ್ಯೆ ಎಷ್ಟೆಂಬ ಮಾಹಿತಿ ತಿಳಿದುಬಂದಿಲ್ಲ.

‘ಕೊಕೇನ್ ಅತ್ಯಂತ ಉತ್ತಮ ಗುಣಮಟ್ಟದ್ದಾಗಿದೆ ಮತ್ತು ಸುಮಾರು 12 ಕೋಟಿ ರೂ. ಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ’ ಎಂದು ಮಾದಕವಸ್ತುಗಳ ಪರಿಚಯವಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ‘ವಶಪಡಿಸಿಕೊಂಡ ವಸ್ತುವನ್ನು ಎನ್‌ಸಿಬಿಗೆ ಹಸ್ತಾಂತರಿಸಲಾಗಿದೆ’ ಎಂದು ಅವರು ಹೇಳಿದರು. 

ಆಕೆ ಸ್ವಂತವಾಗಿ ಕಾರ್ಯನಿರ್ವಹಿಸುತ್ತಿದ್ದಾಳೋ ಅಥವಾ ಯಾವುದಾದರೂ ದಂಧೆಯ ಭಾಗವಾಗಿದ್ದಾರೋ ಎಂಬುದನ್ನು ಪತ್ತೆಹಚ್ಚಲು ವಿಚಾರಣೆ ನಡೆಯುತ್ತಿದೆ.

ommnews

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago