ಹೈದರಾಬಾದ್: ಆಂಧ್ರಪ್ರದೇಶದ ಖ್ಯಾತ ವರಲಕ್ಷ್ಮಿ ಟಿಫನ್ಸ್ ನ ಮಾಲಿಕ ಪ್ರಭಾಕರ್ ರೆಡ್ದಿ ಹಾಗೂ ಅವರ ಸಹಾಯಕ ವೆಂಕಟ ಶಿವ ಸಾಯಿ ಕುಮಾರ್ (ಪಲ್ಲೇತುರು ಪುಲ್ಲಟ್ಲು ಮಾಲಿಕ) ಹಾಗೂ ಗ್ರಾಹಕ-ಪೆಡ್ಲರ್ ನ್ನು ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದಾರೆ.

ಡ್ರಗ್ಸ್
ಕೊಕೆನ್, ಎಂಡಿಎಮ್ಎ ಮುಂತಾದ ಡ್ರಗ್ಸ್ ಗಳನ್ನು ಗೋವಾದಿಂದ ನಗರಕ್ಕೆ ಅಕ್ರಮ ಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ.
ಪೊಲೀಸ್ ಅಧಿಕಾರಿಗಳು 14 ಲಕ್ಷ ಮೌಲ್ಯದ ಅಕ್ರಮ ಡ್ರಗ್ಸ್ 97,500 ರೂಪಾಯಿ ಮೊತ್ತದ ನಗದು, 3 ಕಾರು ಹಾಗೂ 5 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಗ್ರಾಹಕರೂ ಆಗಿರುವ ಪೆಡ್ಲರ್ ಅನುರಾಧ ಪ್ರಮುಖ ಆರೋಪಿಯಾಗಿದ್ದು, ಗೋವಾದಲ್ಲಿ ಹಲವು ವರ್ಷಗಳಿಂದ ಡ್ರಗ್ಸ್ ನ್ನು ಸಂಗ್ರಹಿಸುತ್ತಿದ್ದರು. ಹಣ ಸಂಪಾದನೆಗೆ ಡ್ರಗ್ಸ್ ನ್ನು ಹೈದರಾಬಾದ್ ಗೆ ಸಾರ್ವಜನಿಕ ಸಾರಿಗೆಯ ಮೂಲಕ ಡ್ರಗ್ಸ್ ಸಾಗಿಸುತ್ತಿದ್ದರು ಈ ವೇಳೆ ಈ ಆರೋಪಿ ಪ್ರಭಾಕರ್ ಹಾಗೂ ವೆಂಕಟಗೆ ಪರಿಚಯವಾಗಿದ್ದಾರೆ. ಪ್ರಭಾಕರ್ ಹಾಗೂ ವೆಂಕಟ ಸ್ಥಳೀಯ ಆಹಾರ ಉದ್ಯಮದಲ್ಲಿ ಚಿರಪರಿಚಿತ ಹೆಸರಾಗಿದೆ. ಆದರೆ ಅವರು ಅಕ್ರಮ ಡ್ರಗ್ಸ್ ನ ಗ್ರಾಹಕರೂ ಆಗಿದ್ದರು ಎಂಬ ಅಂಶ ಈಗ ಬೆಳಕಿಗೆ ಬಂದಿದೆ
ಗೋವಾದಲ್ಲಿ ಇನ್ನಷ್ಟೇ ಪೊಲೀಸರಿಗೆ ಪತ್ತೆಯಾಗಬೇಕಿರುವ ಸ್ಥಳದಿಂದ ಎಂಡಿಎಂಎ, ಎಕ್ಸ್ಟೆಸಿ ಮಾತ್ರೆಗಳು ಹಾಗೂ ಹರಳುಗಳನ್ನು ಈ ಆರೋಪಿ ಪ್ರಭಾಕರ್ ಹಾಗೂ ವೆಂಕಟಗೆ ಪೂರೈಕೆ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಆರೋಪಿ ಮೊಕಿಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಸರಕುಗಳನ್ನು ಹಂಚಿಕೊಳ್ಳಲು ಯೋಜನೆ ರೂಪಿಸಿದ್ದರು ಆದರೆ ಡೀಲ್ ವೇಳೆ ಅವರನ್ನು ಬಂಧಿಸಲಾಗಿದೆ