ರಾಜ್ಯ

ಕಾರವಾರ: ಅಪರೂಪ ಪ್ರಭೇದದ ಬೃಹತ್ ತಿಮಿಂಗಿಲದ ಮೃತದೇಹ ಪತ್ತೆ

ಹೊನ್ನಾವರ : ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿ ಕಡಲ ತೀರದಲ್ಲಿ ಅಪರೂಪ ಪ್ರಭೇದದ ಬೃಹತ್ ತಿಮಿಂಗಿಲದ ಮೃತದೇಹವೊಂದು ಪತ್ತೆಯಾಗಿದೆ.

Advertisement
Advertisement
Advertisement

ಈ ತಿಮಿಂಗಲ ಕುರಿತು ತಜ್ಞರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಕೆಲ ತಜ್ಞರು ಇದನ್ನು ಬ್ರೈಡ್‌ ತಿಮಿಂಗಿಲ ಎಂದು ಹೇಳುತ್ತಿದ್ದರೆ, ಮತ್ತೆ ಕೆಲವರು ಬಲೀನ್ ತಿಮಿಂಗಿಲ ಎಂದು ಹೇಳುತ್ತಿದ್ದಾರೆ.ನೇತ್ರಾಣಿ ದ್ವೀಪದ ಬಳಿ ಬಲೀನ್ ತಿಮಿಂಗಿಲಗಳು ಕಾಣಿಸಿಕೊಳ್ಳುತ್ತವೆ ಎಂದು ಹೊನ್ನಾವರದ ಸಮುದ್ರ ತಜ್ಞ ಪ್ರಕಾಶ್ ಮೇಸ್ತಾ ಅವರು ಹೇಳಿದ್ದಾರೆ.

ಪ್ರಸ್ತುತ ಪತ್ತೆಯಾಗಿರುವ ತಿಮಿಂಗಿಲದ ಮೃತದೇಹ ಬಲೀನ್ ತಿಮಿಂಗಿಲದ್ದು. ಇದು ಕಠಿಣ ಭೂಪ್ರದೇಶವಾಗಿರುವುದರಿಂದ ಇಲ್ಲಿ ಜನರು ಬರುವುದು ಕಷ್ಟಸಾಧ್ಯ. ಹೀಗಾಗಯೇ ಕರಾವಳಿ ನಿಯಂತ್ರಣ ವಲಯದ ಅಧಿಕಾರಿಗಳು ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿದ್ದಾರೆಂದು ತಿಳಿಸಿದ್ದಾರೆ.

ಬಲೀನ್ ತಿಮಿಂಗಿಲಗಳು ಸಮುದ್ರದಲ್ಲಿರುವ ಅತಿದೊಡ್ಡ ಸಸ್ತನಿಗಳಲ್ಲಿ ಒಂದಾಗಿದೆ, ಅವು ಸಾಮಾನ್ಯವಾಗಿ 10 ಮೀಟರ್‌ನಿಂದ 102 ಮೀಟರ್ ಉದ್ದವಿರುತ್ತವೆ. ಅಲ್ಲದೆ, ಅಳಿವಿನಂಚಿನಲ್ಲಿರುವ ತಿಮಿಂಗಲಗಳಾಗಿವೆ. ಕಡಲತೀರದಲ್ಲಿ ಅವುಗಳು ಅತ್ಯಂತ ವಿರಳವಾಗಿ ಕಂಡುಬರುತ್ತವೆ, ಪಶ್ಚಿಮ ಕರಾವಳಿಯಲ್ಲಿ. ಇವು ದೊಡ್ಡ ತಿಮಿಂಗಿಲಗಳಾಗಿದ್ದು, ಈ ತಿಮಿಂಗಿಲಗಳು ತಮ್ಮ ಬಾಯಿಯಲ್ಲಿ ಬಲೀನ್ ಎಂಬ ಫಿಲ್ಟರ್-ಫೀಡಿಂಗ್ ವ್ಯವಸ್ಥೆಯನ್ನು ಹೊಂದಿರುತ್ತವೆ. ಇದೇ ಕಾರಣಕ್ಕೆ ಈ ತಿಮಿಂಗಿಲಗಳಿಗೆ ಬಲೀನ್ ಎಂದು ಹೆಸರಿಡಲಾಗಿದೆ.

ಹೊನ್ನಾವರದಲ್ಲಿ ಕಂಡು ಬಂದಿರುವ ತಿಮಿಂಗಿಲ ಸುಮಾರು 46 ಅಡಿ ಉದ್ದ ಮತ್ತು 9 ಅಡಿ ಎತ್ತರವಿದೆ ಎಂದು ಸೆಟಾಶಿಯನ್ ಜೀವಶಾಸ್ತ್ರಜ್ಞ ಮತ್ತು ಸೆಟಾಸಿಯನ್ ಸ್ಪೆಷಲಿಸ್ಟ್ ಗ್ರೂಪ್ನ ಸದಸ್ಯರಾದ ದಿಪಾನಿ ಸುತಾರಿಯಾ ಹೇಳಿದ್ದಾರೆ.

ಇದು ಬ್ರೈಡ್‌ ತಿಮಿಂಗಿಲ ಎಂದೆನಿಸುತ್ತಿದೆ. ತಿಮಿಂಗಿಲ ಕೊಳೆತ ಸ್ಥಿತಿಯಲ್ಲಿದ್ದು, ಮೃತದೇಹ ನೀರಿನಲ್ಲಿ ಬಹುಕಾಲ ಇದ್ದುದ್ದರಿಂದ ವಿಶ್ಲೇಷಣೆ ಮಾಡುವುದು ಕಷ್ಟಸಾಧ್ಯ. ಈ ತಿಮಿಂಗಿಲಗಳು ಕೆಲವು ಸಂದರ್ಭದಲ್ಲಿ ಪಶ್ಚಿಮ ಕರಾವಳಿಯಲ್ಲಿ ಕಂಡು ಬರುತ್ತವೆ ಎಂದು ತಿಳಿಸಿದ್ದಾರೆ.

ommnews

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

1 year ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

1 year ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

1 year ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

1 year ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

1 year ago