ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; 7 ಮಹಿಳೆಯರು ದುರ್ಮರಣ!

By: Ommnews

Date:

Share post:

Safety driving. Expressway traffic accidents involving truck. Crashed sedan car on country road. Semi-truck driver causes crash. Flat vector illustration template.

ರುಪ್ಪತ್ತೂರು (ಸೆ.11): ತಿರುಪ್ಪತ್ತೂರು ಜಿಲ್ಲೆಯ ನಟ್ರಂಪಳ್ಳಿ ಬಳಿ  ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ  ವ್ಯಾನ್-ಲಾರಿ ನಡುವೆ ಸಂಭವಿಸಿರುವ ಭೀಕರ ಅಪಘಾತಕ್ಕೆ 7 ಮಹಿಳೆಯರು ಮೃತಪಟ್ಟ ದುರ್ಘಟನೆ  ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

Advertisement
Advertisement
Advertisement

ಡಿ.ದೇವಯಾನಿ (32),ಸಾವಿತ್ರಿ (42), ಸೈಟ್ಟು (55), ಮೀನಾ (50), ಕಲಾವತಿ (50) ದೇವಿಕಾ (50) ಮತ್ತು ಗೀತಾ(34) ಮೃತ ದುರ್ದೈವಿಗಳು. ಹಲವರು ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಮಹಿಳೆಯರೆಲ್ಲರೂ ತಿರುಪ್ಪತ್ತೂರು ಜಿಲ್ಲೆಯ ಅಂಬೂರು ಸಮೀಪದ ಹಳ್ಳಿಯೊಂದರಿಂದ 45 ಜನರು ಸೆಪ್ಟೆಂಬರ್ 8 ರಂದು ಎರಡು ವ್ಯಾನ್‌ಗಳಲ್ಲಿ ಬೆಂಗಳೂರಿಗೆ ಪ್ರವಾಸಕ್ಕೆ ತೆರಳಿದ್ದರು. ಸೋಮವಾರ ಬೆಳಗ್ಗೆ ಪ್ರವಾಸ ಮುಗಿಸಿ ತಮ್ಮ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಾಟ್ರಂಪಲ್ಲಿ ಬಳಿ ಸಂಡಿಯೂರ್ ದಾಟುತ್ತಿದ್ದಾಗ ವ್ಯಾನ್ ಒಂದರ ಮುಂದಿನ ಟೈರ್ ಪಂಕ್ಚರ್ ಆಗಿದೆ. ವ್ಯಾನ್ ಚಾಲಕ ವಾಹನ ನಿಲ್ಲಿಸಿ ಟೈರ್ ಬದಲಾಯಿಸುತ್ತಿದ್ದಾಗ, ವ್ಯಾನ್‌ನಲ್ಲಿದ್ದ ಮಹಿಳೆಯರು ಕೆಳಗಿಳಿದಿದ್ದಾರೆ.ವ್ಯಾನ್‌ನ ಮುಂಭಾಗದ ಹೆದ್ದಾರಿಯ ಬದಿಯಲ್ಲಿ ಕಟ್ಟೆಯ ಮೇಲೆ ಕುಳಿತಿದ್ದರು. ಅದೇ ಮಾರ್ಗದಲ್ಲಿ ವೇಗವಾಗಿ ಬಂದ ಲಾರಿ ಹಿಂದಿನಿಂದ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ರಸ್ತೆ ಬದಿ ಕುಳಿತಿದ್ದವರ ಮೇಲೆ ವ್ಯಾನ್ ಹರಿದ ಪರಿಣಾಮ ಸ್ಥಳದಲ್ಲೇ ಮಹಿಳೆಯರು ಮೃತಪಟ್ಟಿದ್ದಾರೆ. ಲಾರಿ ಚಾಲಕ, ಕ್ಲೀನರ್ ಸೇರಿದಂತೆ ಹತ್ತು ಮಂದಿಗೆ ತೀವ್ರ ಗಾಯಗಳಾಗಿವೆ.

ಹೆದ್ದಾರಿ ಗಸ್ತು ಪಡೆ ಹಾಗೂ ನಟ್ರಂಪಳ್ಳಿ ಪೊಲೀಸ್ ಠಾಣೆಯ ತಂಡ ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ನಟ್ರಂಪಲ್ಲಿ, ತಿರುಪ್ಪತ್ತೂರು ಮತ್ತು ವಾಣಿಯಂಬಾಡಿ ಸರ್ಕಾರಿ ಜನರಲ್ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section