ನೀವು ಸ್ಮಾರ್ಟ್‌ಫೋನ್ ಅನ್ನು 100 ಪ್ರತಿಶತದಷ್ಟು ಚಾರ್ಜ್ ಮಾಡುತ್ತೀರಾ? ಈಗಲೇ ನಿಲ್ಲಿಸಿ

By: Ommnews

Date:

Share post:

ಪ್ರತಿಯೊಬ್ಬರ ಜೀವನದಲ್ಲಿ ಸ್ಮಾರ್ಟ್‌ಫೋನ್ ಒಂದು ವಿಶೇಷವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರಯಾಣದಿಂದ ಹಿಡಿದು ಪ್ರತಿಯೊಂದು ಖರ್ಚಿಗೂ ನಾವು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತೇವೆ. ಪ್ರಯಾಣದ ವೇಳೆ ಟಿಕೆಟ್ ಖರೀದಿಸುವುದಾಗಲಿ ಅಥವಾ ಯಾವುದೇ ವಸ್ತುವಿನ ಬಿಲ್ ಪಾವತಿಗಾಗಲಿ ಮೊಬೈಲ್ ಮೂಲಕವೇ ಎಲ್ಲ ವಹಿವಾಟು ನಡೆಸುತ್ತೇವೆ. ಆದ್ದರಿಂದ, ಮೊಬೈಲ್ ಫೋನ್‌ಗಳಲ್ಲಿ ಚಾರ್ಜಿಂಗ್ ಒಂದು ಪ್ರಮುಖ ಅಂಶವಾಗಿದೆ.

Advertisement
Advertisement
Advertisement

ಈಗಂತು ಮನೆಯಿಂದ ಹೊರಡುವಾಗ ಪರ್ಸ್ ಇಲ್ಲದಿದ್ದರೂ ತೊಂದರೆಯಿಲ್ಲ, ಮೊಬೈಲ್ ಫೋನ್‌ನಲ್ಲಿ 100 ಪ್ರತಿಶತ ಚಾರ್ಜಿಂಗ್ ಇದ್ದರೆ ಸಾಕು ಎಂದು ಅನೇಕರು ಭಾವಿಸುತ್ತಾರೆ. ನೀವೂ ಸಹ ನಿಮ್ಮ ಸ್ಮಾರ್ಟ್‌ಫೋನ್ ಅನ್ನು 100 ಪ್ರತಿಶತದಷ್ಟು ಚಾರ್ಜ್ ಮಾಡುತ್ತಿದ್ದರೆ, ಈ ಸುದ್ದಿ ನಿಮಗಾಗಿ.

ನೀವು ನಿಮ್ಮ ಸ್ಮಾರ್ಟ್​ಫೋನ್ ಅನ್ನು ಶೇ. 100 ರಷ್ಟು ಚಾರ್ಜ್ ಮಾಡುವುದರಿಂದ ಮುಂದೆ ದೊಡ್ಡ ಸಮಸ್ಯೆಗೆ ಒಳಗಾಗಬಹುದು. ಇದರಿಂದ ಮೊಬೈಲ್ ಬೇಗನೆ ಹಾಳಾಗುತ್ತದೆ. ಹಾಗಾದರೆ ಸ್ಮಾರ್ಟ್​ಫೋನನ್ನು ಎಷ್ಟು ಚಾರ್ಜ್ ಮಾಡಬೇಕು?. ಸ್ಮಾರ್ಟ್‌ಫೋನ್ ಚಾರ್ಜಿಂಗ್‌ಗಾಗಿ ಯಾವಾಗಲೂ 80-20 ಸೂತ್ರವನ್ನು ಬಳಸಿದರೆ ಉತ್ತಮ. ಏಕೆಂದರೆ, ಈ ಸೂತ್ರವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ. ಅಲ್ಲದೆ, ಹೀಗೆ ಮಾಡುವುದರಿಂದ ನಿಮ್ಮ ಫೋನ್ ಯಾವುದೇ ಹಾನಿಯಾಗದೆ ಸುರಕ್ಷಿತವಾಗಿರುತ್ತದೆ.

80-20 ಸೂತ್ರ ಯಾವುದು?

80-20 ಸೂತ್ರ ಯಾವುದು ಎಂದರೆ, ಸ್ಮಾರ್ಟ್‌ಫೋನ್‌ನಲ್ಲಿನ ಚಾರ್ಜಿಂಗ್ ಶೇಕಡಾ 20 ಕ್ಕೆ ಇಳಿಯಲು ಬಿಡಬಾರದು. ಅಂದರೆ, 20 ಪ್ರತಿಶತ ಬ್ಯಾಟರಿ ಉಳಿದಿದ್ದರೆ, ಸ್ಮಾರ್ಟ್‌ಫೋನ್ ಅನ್ನು ಕೂಡಲೆ ಚಾರ್ಜಿಂಗ್‌ನಲ್ಲಿ ಇರಿಸಿ, ಇದು ಬ್ಯಾಟರಿಯ ಮೇಲೆ ಒತ್ತಡವನ್ನು ಹಾಕುವುದಿಲ್ಲ ಮತ್ತು ಬ್ಯಾಟರಿ ಅವಧಿಯನ್ನು ಹೆಚ್ಚಿಸುತ್ತದೆ.

ಮೊಬೈಲ್ ಫೋನ್ ಅನ್ನು ಎಷ್ಟು ಚಾರ್ಜ್ ಮಾಡಬೇಕು?:

ಮೊಬೈಲನ್ನು ಚಾರ್ಜ್ ಮಾಡುವಾಗ ಗಮನಿಸಬೇಕಾದ ಅಂಶವೆಂದರೆ, 100 ಪರ್ಸೆಂಟ್ ಚಾರ್ಜ್ ಆಗುವ ವರೆಗೆ ಬಿಡಬಾರದು. ಮೊಬೈಲ್ ಅನ್ನು 100 ಪ್ರತಿಶತದಷ್ಟು ಚಾರ್ಜ್ ಮಾಡುವುದರಿಂದ ಸ್ಮಾರ್ಟ್‌ಫೋನ್ ಬಿಸಿಯಾಗುತ್ತದೆ ಮತ್ತು ಬ್ಯಾಟರಿಯ ಮೇಲೆ ಒತ್ತಡ ಉಂಟಾಗುತ್ತದೆ, ಇದು ಬ್ಯಾಟರಿ ಸ್ಫೋಟಗೊಳ್ಳಲು ಕಾರಣವಾಗಬಹುದು. ಅಷ್ಟೇ ಅಲ್ಲ, ಬ್ಯಾಟರಿ ಬಾಳಿಕೆ ಕಡಿಮೆಯಾಗುವ ಅಪಾಯವೂ ಇದೆ. ಆದ್ದರಿಂದ, ಸ್ಮಾರ್ಟ್​ಫೋನನ್ನು ಗರಿಷ್ಠ 80 ಪ್ರತಿಶತದಷ್ಟು ಚಾರ್ಜ್ ಮಾಡಿದರೆ ಉತ್ತಮ. ಹೀಗೆ ಮಾಡುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section