
ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಸ್ಥಾಪನ ದಿನಾಚರಣೆಯ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆ ಮತ್ತು ಪುತ್ತೂರು ಮೊಸರು ಕುಡಿಕೆ ಉ ಉತ್ಸವ ಸಮಿತಿಯಿಂದ ಸೆ.9 ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರದಲ್ಲಿ 13 ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಪ್ರತ್ತೂರು ನಗರದಲ್ಲಿ ಭವ್ಯ ಶೋಭಾಯಾತ್ರೆಯ ಉದ್ಘಾಟನಾ ಕಾರ್ಯಕ್ರಮ ಬೊಳುವಾರಿನಲ್ಲಿ ನಡೆಯಿತು.
ಡಾ.ಎಂ.ಕೆ ಪ್ರಸಾದ್ ಶೋಭಾಯಾತ್ರೆಗೆ ಚಾಲನೆ ನೀಡಿದರು. ಬಾಲಕೃಷ್ಣನ ವೇಷಧರಿಸಿದ ವೈಭವ್ ಸಾಂಕೇತಿಕವಾಗಿ ಮೊಸರು ಕುಡಿಕೆ ಒಡೆದರು. ಶ್ರೀಕೃಷ್ಣನ ರಥದಲ್ಲಿ ಅನಿಕ್ ಲಕ್ಷ್ಮೀ ಕೃಷ್ಣನಾಗಿ , ಲಕ್ಷ್ಮೀ ಅಹನ್ ಅರ್ಜುನನಾಗಿ ಸಹಕರಿಸಿದರು.